ಬೆಂಗಳೂರು: ಇತ್ತೀಚೆಗೆ ಆನ್ ಲೈನ್ ಗೇಮಿಂಗ್(online game) ಹುಚ್ಚಾಟ ಹೆಚ್ಚಾಗುತ್ತಿದ್ದು, ಒಂದೇ ದಿನ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಇತ್ತೀಚೆಗೆ ಆನ್ ಲೈನ್ ಗೇಮಿಂಗ್ ಮೂಲಕ ಹೆಚ್ಚು ಹಣ (money)ಗಳಿಸುವ ಹುಚ್ಚಿಗೆ ಯುವಕರು ಬೀಳುತ್ತಿದ್ದಾರೆ. ಇದರಿಂದಾಗಿ ಹಣ ಕಳೆದುಕೊಂಡು ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಹೀಗೆ ಹಣ ಕಳೆದುಕೊಂಡು ಒತ್ತಡಕ್ಕೆ ಸಿಲುಕಿ, ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಗರದ ಮಹದೇವಪುರ ಹಾಗೂ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಗಳು ವರದಿಯಾಗಿವೆ. ವಿಜಯನಗರ ಮೂಲದ ಮಲ್ಲಿಕಾರ್ಜುನ (Mallikarjuna) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲಿಕಾರ್ಜುನ ವಿಜಯನಗರದಿಂದ ಬೆಂಗಳೂರಿಗೆ ಬಂದು, ಖಾಸಗಿ ಆಸ್ಪತ್ರೆಯೊಂದರಲ್ಲಿ ಮೆಡಿಕಲ್ ಅಸಿಸ್ಟೆಂಟ್ (Medical Assistant) ಆಗಿ ಕೆಲಸ ಮಾಡುತ್ತಿದ್ದ. ಈತ ನಾಲ್ಕೈದು ವರ್ಷಗಳಿಂದ ಆನ್ ಲೈನ್ ಗೇಮ್ ಆಡುತ್ತಿದ್ದ. ಸಾಕಷ್ಟು ಬಾರಿ ಹಣ ಕಳೆದುಕೊಂಡರೂ ಸಾಲ ಮಾಡಿ ಹಣ ಹಾಕುತ್ತಿದ್ದ. ಈಗ ಬೇಸತ್ತು ಮಲ್ಲಿಕಾರ್ಜುನ ಆತ್ಮಹತ್ಯೆಗೆ (suicied) ಶರಣಾಗಿದ್ದಾರೆ.
ಆನ್ಲೈನ್ ಗೇಮ್ ನ ಗೀಳಿಗೆ ಬಿದ್ದು ಆಟೋ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಳ್ಳಾರಿ ಮೂಲದ ಆಟೋ ಡ್ರೈವರ್ ಎಂದು ಗುರುತಿಸಲಾಗಿದೆ. ಪತ್ನಿ ಸೇರಿದಂತೆ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.
ಆಟೋ ಓಡಿಸಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಇದರ ಮಧ್ಯೆ ಆನ್ ಲೈನ್ ಗೇಮಿನ ಹುಚ್ಚಿಗೆ ವ್ಯಕ್ತಿ ಬಿದ್ದಿದ್ದ. ಆದರೆ, ಆನ್ ಲೈನ್ ಗೇಮ್ ನಲ್ಲಿ ಲಾಸ್ ಆಗಿದ್ದ. ಇದರಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಂದೂರು ಪೊಲೀಸರು(police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.