ಬೆಂಗಳೂರು: ದೇಶದಲ್ಲೇ ಸರ್ಕಾರಿ ವಲಯದ ಬೃಹತ್ ತೈಲ ಹಾಗೂ ನೈಸರ್ಗಿಕ ಅನಿಲ ಉತ್ಪಾದನಾ ಕಂಪನಿಯಾಗಿರುವ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ONGC Sports Scholarship Scheme 2025-26) 2025-26ನೇ ಸಾಲಿಗೆ ಸ್ಕಾಲರ್ ಶಿಪ್ ಘೋಷಣೆ ಮಾಡಿದೆ. ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ತಿಂಗಳಿಗೆ 15 ಸಾವಿರ ರೂ.ನಿಂದ 30 ಸಾವಿರ ರೂ. ವಿದ್ಯಾರ್ಥಿವೇತನ ನೀಡುವ ಯೋಜನೆ ಇದಾಗಿದೆ.
ಅಥ್ಲೆಟಿಕ್ಸ್, ಕ್ರಿಕೆಟ್, ಫುಟ್ ಬಾಲ್, ಹಾಕಿ, ಬ್ಯಾಡ್ಮಿಂಟನ್, ಚೆಸ್, ಕಬಡ್ಡಿ, ವಾಲಿಬಾಲ್, ಸ್ವಿಮ್ಮಿಂಗ್ ಸೇರಿ ಸುಮಾರು 21 ಕ್ರೀಡೆಗಳಲ್ಲಿ ತೊಡಗಿಸಿಕೊಂಡವರಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಬಡ ಕ್ರೀಡಾಪಟುಗಳು ತರಬೇತಿ ಪಡೆಯಲು, ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಲು ಪ್ರೋತ್ಸಾಹಧನವಾಗಿ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನವಾಗಿದೆ.
ಅರ್ಹತೆಗಳು ಏನೇನು?
ಅರ್ಜಿ ಸಲ್ಲಿಸುವ ಪುರುಷ ಅಥವಾ ಮಹಿಳಾ ಕ್ರೀಡಾಪಟುವಿನ ವಯಸ್ಸು 15-20 ವರ್ಷದೊಳಗಿರಬೇಕು
ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರಬೇಕು
ಕ್ರೀಡಾಪಟುಗಳು ಆದಾಯ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯ
ಬೇಕಾಗುವ ದಾಖಲೆಗಳು
ಜನನ ಪ್ರಮಾಣಪತ್ರ, ಕ್ರೀಡಾ ಸಾಧನೆ ಸರ್ಟಿಫಿಕೇಟ್ ಗಳು, ಪೋಷಕರ ಆದಾಯ ಪ್ರಮಾಣಪತ್ರ, ಅಧಿಕೃತ ಗುರುತಿನ ಚೀಟಿ , ಬ್ಯಾಂಕ್ ಖಾತೆ ವಿವರ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು sportsscholarship.ongc.co.in ವೆಬ್ ಸೈಟ್ ಗೆ ಭೇಟಿ ನೀಡಬೇಕು
ಕ್ರೀಡಾ ಸಾಧನೆ, ಆದಾಯ ಪ್ರಮಾಣಪತ್ರ ಸೇರಿ ಎಲ್ಲ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು
ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿದ ಬಳಿಕ ಸಬ್ ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು