ಬೆಂಗಳೂರು: ರಾಜ್ಯದ ಮದ್ಯ ಪ್ರಿಯರಿಗೆ ಸರ್ಕಾರದಿಂದ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೂರನೇ ಬಾರಿ ರಾಜ್ಯದಲ್ಲಿ ಮದ್ಯದ ದರ ಹೆಚ್ಚಳವಾಗುತ್ತಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಶಾಕ್ ಎದುರಾಗುತ್ತಿದೆ.
ರಾಜ್ಯ ಸರ್ಕಾರವು ಈಗ ಎಲ್ಲ ಬಗೆಯ ಬ್ರ್ಯಾಂಡ್ ಗಳ ಮೇಲೆ ಕನಿಷ್ಠ ಶೇ. 10ರಿಂದ ಗರಿಷ್ಠ ಶೇ. 25ರ ವರೆಗೆ ದರ ಏರಿಕೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ವಿಸ್ಕಿ, ರಮ್, ಜಿನ್, ವೋಡ್ಕಾ, ಬಿಯರ್ ಹಾಗೂ ಎಐಎಂಎಲ್ ಗಳ ಮೇಲಿನ ದರ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಈ ವಾರದಿಂದಲೇ ಮದ್ಯದ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಎಲ್ಲ ಮದ್ಯ ಮಾರಾಟಗಾರರಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಎಲ್ಲ ಮಾದರಿಯ ಬ್ರ್ಯಾಂಡ್ ಬಿಯರ್ ಮೇಲೆ ಶೇ.10ರಷ್ಟು ಬೆಲೆ ಏರಿಕೆಯಾಗಲಿದೆ. ಹೀಗಾಗಿ ಬಿಯರ್ ಮೇಲಿನ ದರ ಕನಿಷ್ಠ 20 ರೂ. ಏರಿಕೆಯಾಗಲಿದೆ. 180 ML ಮದ್ಯದ ಮೇಲೆ 10 ರಿಂದ 25 ರೂ. ದರ ಏರಿಕೆಯಾಗಲಿದೆ. ಫುಲ್ ಬಾಟಲ್ ಮೇಲೆ 50 ರೂ. ನಿಂದ 100 ರೂ. ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಒಟ್ಟು 16 ಸ್ಲ್ಯಾಬ್ ಗಳಲ್ಲಿ 1 ರಿಂದ 4 ಸ್ಲ್ಯಾಬ್ ಗಳ ಮೇಲೆ ದರ ಏರಿಕೆ ಏರಿಕೆ ಮಾಡಲು ಅಬಕಾರಿ ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಸ್ಲ್ಯಾಬ್ ಏರಿಕೆ ಹೇಗಿದೆ?
ಸ್ಯ್ಲಾಬ್-1 : 80 ರೂ. ಇದ್ದ ಮದ್ಯದ ಮೇಲೆ 10 ರೂ. ಏರಿಕೆ
ಸ್ಲ್ಯಾಬ್- 2 : 155 ರೂ. ಇದ್ದ ಮದ್ಯದ ಮೇಲೆ 15 ರೂ. ಏರಿಕೆ
ಸ್ಲ್ಯಾಬ್- 3 : 185 ರೂ. ಇದ್ದ ಮದ್ಯದ ಮೇಲೆ 15 ರಿಂದ 20 ರೂ. ಏರಿಕೆ
ಸ್ಲ್ಯಾಬ್- 4 : 235 ರೂ. ಇದ್ದ ಮದ್ಯದ ಮೇಲೆ 20 ರಿಂದ 25 ರೂ. ಏರಿಕೆ.


















