ಬೆಂಗಳೂರು: ರಾಜ್ಯದಲ್ಲಿ ಫೆ. 1ರಂದು ನಂದಿನಿ ಹಾಲು ಹಾಗೂ ಮೊಸರು ಸಿಗುವುದಿಲ್ಲ ಎನ್ನಲಾಗುತ್ತಿದೆ. ಕೆಎಂಎಫ್ ಆಡಳಿತ ಮಂಡಳಿ ವಿರುದ್ದ ಅಧಿಕಾರಿಗಳು ಹಾಗೂ ನೌಕರರು ಸಮರ ಸಾರಿರುವ ಹಿನ್ನೆಲೆಯಲ್ಲಿ ಆ ದಿನ ನಂದಿನಿ ಉತ್ಪನ್ನಗಳು ಮಾರುಕಟ್ಟೆಗೆ ಬರುವುದಿಲ್ಲ ಎನ್ನಲಾಗುತ್ತಿದೆ.
ಅಧಿಕಾರಿಗಳು ಹಾಗೂ ನೌಕರರು ಏಳನೇ ವೇತನ ಆಯೋಗ ವರದಿಯಂತೆ (Seventh Pay Commission Report) ವೇತನ ನೀಡುವಂತೆ ಆಗ್ರಹಿಸಿ, ಫೆ. 1ರಿಂದ ಕೆಎಂಎಫ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ ಫೆ. 2ಕ್ಕೆ ರಾಜ್ಯಾದ್ಯಂದ ಹಾಲು ಹಾಗೂ ಮೊಸರು ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಕೆಎಂಫ್ ನೌಕರಸ್ಥರು ಹಲವು ಬಾರಿ ಈ ಕುರಿತು ಮನವಿ ಮಾಡಿದರೂ ಆರ್ಥಿಕ ಹೊರೆಯ (Financial burden) ಕಾರಣ ನೀಡಿ ವೇತನ ಪರಿಷ್ಕರಣೆಗೆ ಕೆಎಂಎಫ್ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಹೀಗಾಗಿ ಫೆ 1 ರಿಂದ ಕೆಎಂಎಫ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರಿಸಲಾಗಿದೆ.
ರಾಜ್ಯಾದ್ಯಂತ 7 ಸಾವಿರಕ್ಕೂ ಅಧಿಕ ಅಧಿಕಾರಿ-ನೌಕರರು ಕೆಎಂಎಫ್ ನಲ್ಲಿ ಸೇವೆ ಮಾಡುತ್ತಿದ್ದು, ಏಳನೇ ವೇತನ ಜಾರಿ ಮಾಡುವಂತೆ ಅನೇಕ ತಿಂಗಳುಗಳಿಂದ ಒತ್ತಡ ಹಾಕುತ್ತಿದ್ದಾರೆ. ಆದರೂ ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇತ್ತೀಚೆಗೆ ನೌಕರಸ್ಥರು ಸಂಬಳ ಹೆಚ್ಚಿಸಲು ಗಡುವು ಕೂಡ ನೀಡಿದ್ದರು. ಫೆ. 1ಕ್ಕೆ ಡೆಡ್ ಲೈನ್ ಅಂತ್ಯವಾಗುತ್ತದೆ. ಹೀಗಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಪರಿಷ್ಕೃತ ಶ್ರೇಣಿ- ವೇತನ ಸೌಲಭ್ಯಗಳನ್ನು 2024 ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಆದೇಶವಿದ್ದರೂ ತಾಂತ್ರಿಕ ನೆಪವೊಡ್ಡಿ ಕೆಎಂಎಫ್ ಹಾಗೂ ಒಕ್ಕೂಟಗಳು ಯಥಾವತ್ ಯೋಜನೆ ಜಾರಿ ಮಾಡಲು ಹಿಂದೇಟು ಹಾಕುತ್ತಿವೆ. ಹೀಗಾಗಿ ಫೆ-1 ರ ಬಳಿಕ ಕೆಎಂಎಫ್ ಚಟುವಟಿಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನೌಕರಸ್ಥರು ಮುಂದಾಗಿದ್ದಾರೆ ಎನಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲಿ ಎರಡು ಮಾತಿಲ್ಲ.