ಚಿತ್ರದುರ್ಗ: ಹೃದಯಾಘಾತಕ್ಕೆ ಜಿಲ್ಲೆಯಲ್ಲಿ ವೈದ್ಯರೊಬ್ಬರು ಬಲಿಯಾಗಿದ್ದಾರೆ. ವೈದ್ಯ ದಿನಾಚರಣೆಯ ದಿನವೇ ವೈದ್ಯರು ಮಣ್ಣಲ್ಲಿ ಮಣ್ಣಾಗಿರುವುದಕ್ಕೆ ಇಡೀ ವೈದ್ಯ ಸಂಕುಲ ಕಂಬನಿ ಮಿಡಿಯುತ್ತಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಅರಸನಘಟ್ಟದಲ್ಲಿ ಈ ಘಟನೆ ನಡೆದಿದೆ. ಡಾ. ಎನ್. ಸಂದೀಪ್(48) ಹೃದಯಾಘಾತಕ್ಕೆ ಬಲಿಯಾದ ವೈದ್ಯ. ಸಂದೀಪ್ ಶಿವಮೊಗ್ಗ ಜಿಲ್ಲೆಯ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಇಂದು ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇಂದು ಸ್ವಗ್ರಾಮ ಅರಸನಘಟ್ಟದಲ್ಲಿ ಡಾ. ಸಂದೀಪ್ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು. ವೈದ್ಯರ ಹೃದಯಾಘಾತದಿಂದಾಗಿ ರಾಜ್ಯದಲ್ಲಿ ಆತಂಕ ಮನೆ ಮಾಡುತ್ತಿದೆ.