2014-15ರ ಕಾಂತರಾಜು ಜಾತಿ ಗಣತಿ (Caste census)ವಿರುದ್ಧ ರಾಜ್ಯ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಕಾಂತರಾಜ ಆಯೋಗ ಸಿದ್ದಪಡಿಸಿರುವ ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಪ್ರತಿ ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಿ ಜಾತಿ ಗಣತಿ ಸಿದ್ದಪಡಿಸಿಲ್ಲ. ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆ ಇದೆ. ಆದರೆ, ವರದಿಯಲ್ಲಿ 5.98 ಕೋಟಿ ಜನಸಂಖ್ಯೆ ಲೆಕ್ಕ ತೋರಿಸಿದ್ದಾರೆ. ಹಾಗಾದರೆ ಇನ್ನೊಂದು ಕೋಟಿ ಜನಸಂಖ್ಯೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಈ ಜಾತಿ ಗಣತಿಯಲ್ಲಿ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡದೆ, ಪ್ರತಿ ಅರ್ಜಿಗೆ 5 ರೂ. ನಿಂದ 10 ರೂ ಕೊಟ್ಟು ಸಮೀಕ್ಷೆ ತಯಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಮೀಕ್ಷೆಯಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ. ಹೀಗಾಗಿ ಒಕ್ಕಲಿಗರ ಸಂಘ ಹಾಗೂ ವೀರಶೈವ(Veerashaiva) ಸಮುದಾಯದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.