ಬೆಂಗಳೂರು: ಅಡುಗೆ ಎಣ್ಣೆ ಮೇಲೆ ಆಹಾರ ಹಾಗೂ ಸುರಕ್ಷತಾ ಇಲಾಖೆ ಕಾರ್ಯಾಚರಣೆ ನಡೆಸಿ ಬೇಕರಿ, ಹೋಟೆಲ್‌ನಲ್ಲಿ ಎಣ್ಣೆ ಮರುಬಳಕೆ ಮಾಡುವಂತಿಲ್ಲ ಎಂದು ಆದೇಶಿಸಿದೆ.
ಈ ಬೆನ್ನಲ್ಲೇ ಹೋಟೆಲ್ ಮಾಲಿಕರು ಅಡುಗೆ ಎಣ್ಣೆಯ ಫ್ಯಾಟ್ ಚೆಕ್ಕಿಂಗ್‌ಗೆ ಡಿವೈಸ್ ಖರೀದಿ ಮಾಡಲು ಮುಂದಾಗಿದ್ದು ಈ ಡಿವೈಸ್ ಮೂಲಕ ಅಡುಗೆ ಎಣ್ಣೆಯ ಗುಣಮಟ್ಟ ಪರೀಕ್ಷಿಸಬಹುದಾಗಿದೆ.
ಡಿವೈಸ್ ಬೆಲೆ ಬರೋಬ್ಬರಿ 50 ಸಾವಿರ ರೂ. ಆಗಿದ್ದು, ಬೆಲೆ ಕೇಳಿ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಸದ್ಯ, ಆಹಾರ ಇಲಾಖೆಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲು ನಿರ್ಧರಿಸಿದ್ದು ಹೋಟೇಲ್ ಮಾಲೀಕರ ಸಂಘ ಮುಂದಾಗಿದ್ದು, ಕಾರ್ಯಾಗಾರ ನಡೆಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಕಡಿಮೆ ದರದಲ್ಲಿ ಡಿವೈಸ್ ಖರೀದಿಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ತಯಾರಾಗಿದ್ದಾರೆ.
ಇಲಾಖೆಯ ಆದೇಶವನ್ನು ಪಾಲಿಸುವುದು ಜನರ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಆದರೆ ಕೆಲ ಗೊಂದಲವಿದ್ದು, ಇದನ್ನು ಬಗೆಹರಿಸಿಕೊಳ್ಳುತ್ತೇವೆ. ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡುವುದು ನಮ್ಮ ಉದ್ದೇಶವೆಂದಿದ್ದಾರೆ.
 
                                 
			 
			
 
                                 
                                


















