ಜಂಜಾಟದ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುದೊಡ್ಡ ಜವಾಬ್ದಾರಿಯಾಗಿರುತ್ತದೆ. ಕೆಲಸದ ಒತ್ತಡ ಇದ್ದರೂ ನಮ್ಮ ದೇಹವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಬೇಗೆಯಂತೂ ಹೆಚ್ಚಾಗಿದೆ. ಹೀಗಾಗಿ ಆರೋಗ್ಯವನ್ನು ಬಿಸಿಲಿನಿಂದ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.

ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ಅದೇ ರೀತಿ ವರ್ಷದಿಂದ ವರ್ಷಕ್ಕೆ ತಾಪಮಾನ ಕೂಡ ಹೆಚ್ಚಾಗುತ್ತಿದೆ. ಇದು ನಮ್ಮ ದೇಹದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಕ್ಕಳು, ದೊಡ್ಡವರು, ವಯಸ್ಸಾದವರು ಎಲ್ಲರೂ ಬೇಸಿಗೆಯ ತಾಪಮಾನ ಅನುಭವಿಸಲೇಬೇಕು. ಈ ಬಿಸಿಲಿನಿಂದ ನಮ್ಮ ಆರೋಗ್ಯವನ್ನು ನಾವು ಸುರಕ್ಷಿತವಾಗಿ ಇಟ್ಟುಕೊಳ್ಳಲು ಕೆಲವೊಂದು ಸಲಹೆ ಅನುಭವಿಸಲೇಬೇಕು.

ಈ ಸುಡುವ ಬಿಸಿಲಿಗೆ ಅದೆಷ್ಟು ನೀರು ಕುಡಿದರೂ ನಮಗೆ ಸಾಕಾಗುವುದಿಲ್ಲ. ಹೀಗಾಗಿ ನಾವು ನಮ್ಮ ದೇಹಕ್ಕೆ ಹೆಚ್ಚಿನ ನೀರಿನ ಅಂಶವನ್ನು ನೀಡುವುದು ಬಹಳ ಸೂಕ್ತ. ತಂಪು ಪಾನೀಯಗಳ ಮೊರೆ ಹೋಗುವುದು ಕೂಡ ಬಹಳ ಒಳ್ಳೆಯದು. ಅದರಲ್ಲೂ ಕಲ್ಲಂಗಡಿ ಜ್ಯೂಸ್, ಎಳನೀರು ಸೇವಿಸುವುದು ಬಹಳ ಪ್ರಯೋಜನಕಾರಿಯಾಗಿದೆ. ಬೇಸಿಗೆಯಲ್ಲಿ ಅನೇಕ ಜನ ಇಷ್ಟಪಡುವ ಹಣ್ಣು ಎಂದರೆ ಅದು ಕಲ್ಲಂಗಡಿ ಹಣ್ಣು. ಇದರಲ್ಲಿ ಹೇರಳವಾದ ನೀರಿನ ಅಂಶ ಇದ್ದು ನಮ್ಮ ದೇಹ ತಂಪಾಗಿರಿಸಲು ಇದು ಸಹಾಯ ಮಾಡುತ್ತದೆ. ಎಳನೀರು ಕೂಡ ದಾಹವನ್ನು ತಣಿಸಲು ಆರೋಗ್ಯಕ್ಕೆ ಪೂರಕವಾಗಿದೆ. ದಿನವಿಡೀ ಬಿಸಿಲಲ್ಲಿ ಓಡಾಡಿದ ನಮಗೆ ಎಳನೀರಿನ ಜ್ಯೂಸ್ ಮಾಡಿ ಕುಡಿಯುವುದು ಅಥವಾ ಎಳನೀರು ಗಂಜಿಯನ್ನು ಸೇವಿಸುವುದು ಉತ್ತಮ. ಇದರಲ್ಲಿ ನಮ್ಮ ದೇಹವನ್ನು ತಂಪಾಗಿರಿಸಲು ಬೇಕಾದಂತಹ ಅಂಶಗಳು ಇರುತ್ತವೆ. ಹೀಗಾಗಿ ದಿನವಿಡೀ ಉಲ್ಲಾಸದಿಂದ ಇರಲು ಈ ರೀತಿ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.



















