ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದಾಗಿ ಸರಣಿ ಸಾವಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲಾ ಆರೋಗ್ಯಾಧಿಕಾರಿ ನೇತೃತ್ವದ ತನಿಖಾ ತಂಡ ಮೃತರ ಮನೆಗಳಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕುತ್ತಿದೆ.
ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಈಗ ಆರೋಗ್ಯ ಇಲಾಖೆ ಮುಂದಾಗಿದೆ. ಇಂದು ವೈದ್ಯರ ತಂಡ ಹಾಸನ ತಾಲ್ಲೂಕಿನ ಚಿಕ್ಕಕೊಂಡಗುಳ ಸತೀಶ್ ಮನೆಗೆ ಭೇಟಿ ನೀಡಿತ್ತು. ಮೃತ ಸತೀಶ್ ಪತ್ನಿ, ತಾಯಿಯಿಂದ ಮಾಹಿತಿ ಕಲೆ ಹಾಕಲಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಸತೀಶ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಯಿತು.
ಆರೋಗ್ಯ ಹೇಗಿತ್ತು? ಆಹಾರ ಪದ್ದತಿ ಹೇಗಿತ್ತು? ಸೇರಿದಂತೆ ಹಲವು ವಿವಿರಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವ ಎಲ್ಲರ ಕುಟುಂಬಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಲು ಈಗ ವೈದ್ಯರ ತಂಡ ನಿರ್ಧರಿಸಿದೆ. ತಂಡದಲ್ಲಿ ಆರ್ ಸಿಹೆಚ್ ಡಾ.ಚೇತನ್, ಮೆಡಿಸನ್ ವಿಭಾಗದ ಡಾ.ಬಿಂದು ಸೇರಿದಂತೆ ಹಲವರಿದ್ದಾರೆ.