ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಪೊಲೀಸ್ ಜತೆ ಸಿಕ್ಕಿಬಿದ್ದಿದ್ದಕ್ಕೆ ಹಿಂಬಡ್ತಿ ನೀಡಿ ಶಿಕ್ಷೆ ವಿಧಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಾನ್ಸ್ಟೇಬಲ್ ಆಗಿ ಹಿಂಬಡ್ತಿ ನೀಡಲಾಗಿದೆ. ಈ ಪ್ರಕರಣ ನಡೆದು ಮೂರು ವರ್ಷಗಳ ಬಳಿಕ ಡಿಎಸ್ ಕೃಪಾ ಶಂಕರ್ ಕನೌಜಿಯಾ ಅವರನ್ನು ಕಾನ್ಸ್ಟೆಬಲ್ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಉನ್ನಾವೊದಲ್ಲಿ ಸರ್ಕಲ್ ಆಫೀಸರ್ (ಸಿಒ) ಬಿಘಾಪುರ್ ಹುದ್ದೆಯನ್ನು ಹೊಂದಿದ್ದ ಕೃಪಾ ಶಂಕರ್ ಕನೌಜಿಯಾ ಅವರನ್ನು ಈಗ ಗೋರಖ್‌ಪುರದ 26 ನೇ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ಬೆಟಾಲಿಯನ್ ಗೆ ನಿಯುಕ್ತಿಗೊಳಿಸಲಾಗಿದೆ.
2021ರಲ್ಲಿ ರಜೆ ತೆಗೆದುಕೊಂಡಿದ್ದರು. ಆದರೆ ಮನೆಗೆ ಹೋಗುವ ಬದಲು ಮಹಿಳಾ ಪೊಲೀಸ್ ಜತೆ ಹೋಟೆಲ್ ಗೆ ತೆರಳಿದ್ದರು. ಪತಿಯ ಹಠಾತ್ ನಾಪತ್ತೆಯ ಕುರಿತು ಕಳವಳ ವ್ಯಕ್ತಪಡಿಸಿದ ಸಿಒ ಪತ್ನಿ ಸಹಾಯಕ್ಕಾಗಿ ಎಸ್ಪಿ ಉನ್ನಾವ್ ಅವರನ್ನು ಸಂಪರ್ಕಿಸಿದರು. ನಂತರ ಪೊಲೀಸರು ಮೊಬೈಲ್ ನಂಬರ್ ಟ್ರೇಸ್ ಮಾಡಿ ಅವರ ಮೊಬೈಲ್ ಹೋಟೆಲ್ ನಲ್ಲಿರುವುದನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಅವರಿಬ್ಬರು ಸಿಕ್ಕಿದ್ದರು. ಘಟನೆಯ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕಾನ್‌ಸ್ಟೆಬಲ್ ಹುದ್ದೆಗೆ ಹಿಂತಿರುಗಿಸಲು ಶಿಫಾರಸು ಮಾಡಿದೆ. ADG ಅಡ್ಮಿನಿಸ್ಟ್ರೇಷನ್ ಕೂಡಲೇ ಈ ನಿರ್ಧಾರವನ್ನು ಜಾರಿಗೆ ತರಲು ಆದೇಶ ಹೊರಡಿಸಿತು.