ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಯವಾಗಿದ್ದು, ಭಕ್ತರಿಂದ ಕಾಣಿಕೆ ಹರಿದು ಬಂದಿದೆ.
ಭಕ್ತರಿಂದ ಕಾಣಿಕೆ ಹುಂಡಿಯಲ್ಲಿ 59 ಲಕ್ಷ ರೂ. ಮೊತ್ತದ ಕಾಣಿಕೆ ಸಂಗ್ರಹವಾಗಿದೆ.
63 ಸಾವಿರ ಬೆಲೆ ಬಾಳುವ 1 ಕೆಜಿ 400 ಗ್ರಾಂ ಬೆಳ್ಳಿ, 1 ಲಕ್ಷ 57 ಸಾವಿರ ರೂ. ಮೌಲ್ಯದ 19 ಗ್ರಾಂ ಚಿನ್ನ ಸಂಗ್ರಹವಾಗಿದೆ. ದೇವಾಲಯಕ್ಕೆ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಗಿದ್ದು, ದೇವಾಲಯದ ಇಓಎಂ ನಾರಾಯಣಸ್ವಾಮಿ, ಪ್ರಧಾನ ಅರ್ಚಕ ಶ್ರೀನಿಧಿ ನೇತೃತ್ವದಲ್ಲಿ ಹುಂಡಿ ಎಣಿಕೆ ಮಾಡಲಾಗಿದೆ.