ಬೆಂಗಳೂರು : ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಬಾರ್‌ನಲ್ಲಿ ಕಿರಿಕ್ ಮಾಡಿ, ನಟ ನಿರಂಜನ್ ಕುಮಾರ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ್ದಾರೆ. ಮಾರ್ಚ್ 28ರಂದು ನಡೆದ ಈ ಒಂದು ಹಲ್ಲೆ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ
ಬಾರ್‌ನಲ್ಲಿ ಕಿರಿಕ್ ಮಾಡಿ ದುಷ್ಕರ್ಮಿಗಳು ನಟ ನಿರಂಜನ್ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಮಾರ್ಚ್ 28 ರಂದು ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಒಡೆಯ ಚಿತ್ರದಲ್ಲಿ ದರ್ಶನ್ ತಮ್ಮನ ಪಾತ್ರದಲ್ಲಿ ನಟ ನಿರಂಜನ್ ನಟಿಸಿದ್ದರು. ಕೆಲಸ ನಿಮಿತ್ಯವಾಗಿ ನಟ ಯಶಸ್ ಸೂರ್ಯ ನಿವಾಸಕ್ಕೆ ನಿರಂಜನ್ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಬಿಯರ್ ಬಾಟಲ್ ಇಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲಸ ಮುಗಿಸಿ ಮಂತ್ರಿ ಆಲಯನ್ಸ್, ಬಳಿಯ ಬಾರ್ ಗೆ ನಟ ನಿರಂಜನ್ ಬಂದಿದ್ದರು. ನೀರು ಕುಡಿಯಲೆಂದು ಬಾರಿಗೆ ಬಂದಿದ್ದೆ ಅಂತ ನಟ ನಿರಂಜನ್ ಹೇಳಿಕೆ ನೀಡಿದ್ದು ನಿರಂಜನನ್ನು ತಳ್ಳಿದಕ್ಕೆ ಗಲಾಟೆ ಆಗಿದೆ ನೀನು ನಟನಾದರೆ ನನಗೇನು ಎಂದು ಅಪರಿಚಿತ ವ್ಯಕ್ತಿ ನನಗೆ ಬೈದಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಬಂದ ನಾಲ್ವರು ದುಷ್ಕರ್ಮಿಗಳು ನಿರಂಜನ್ ಜೊತೆಗೆ ಮತ್ತೆ ಕಿರಿಕ್ ಮಾಡಿದ್ದಾರೆ ಈ ವೇಳೆ ಬಿಯರ್ ಬಾಟಲಿನಿಂದ ಹಲ್ಲೆ ಮಾಡಿದ್ದಾರೆ. ಘಟನೆ ಸಂಭಂದ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ : ಸೈಟ್ ವಿಚಾರಕ್ಕೆ ವೈಮನಸ್ಸು.. ಬಿಯರ್ ಬಾಟಲ್‌ನಿಂದ ಮಾರಣಾಂತಿಕ ಹಲ್ಲೆ


















