ರಾಜ್ಯದಲ್ಲಿ ಹಿಂದೂಗಳ ಹತ್ಯೆಯಾಗುತ್ತಿರುವುದು ಬಹಳ ನೋವಿನ ಸಂಗತಿ. ಅಮಾಯಕ ಹಿಂದೂಗಳ ಹತ್ಯೆ ಬಹಳಷ್ಟು ಕಡೆ ನಡೆಯುತ್ತಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಶ್ರೀಶೈಲ ಶ್ರೀಗಳು ಹೇಳಿದ್ದಾರೆ.
ಅಮೀನಗಡದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಹಲವು ಸಮುದಾಯ, ಸಂಪ್ರದಾಯದ ವಿಶಿಷ್ಟ ದೇಶ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಪರಿಪಾಲನೆ ಈ ದೇಶದ ಕಡ್ಡಾಯ ನಿಯಮ.
ಧರ್ಮದ ಹಿನ್ನೆಲೆಯನ್ನಿಟ್ಟುಕೊಂಡು ದ್ವೇಷ ಸಾಧಿಸುವುದಾಗಲಿ, ಮಹಾ ದ್ವೇಷ ಒಬ್ಬರನ್ನು ಹತ್ಯೆ ಮಾಡುವ ಮಟ್ಟಕ್ಕೆ ಹೋಗುವುದಾಗಲಿ ಇದು ಸರ್ವಥ ಖಂಡನೀಯವಾದದ್ದು, ಯಾವುದೇ ಧರ್ಮ ಅದು ಕೊಲೆಯನ್ನು ಪ್ರತಿಪಾದನೆ ಮಾಡುತ್ತದೆ ಎಂದಾದರೇ ಅದು ನಮ್ಮ ದೃಷ್ಟಿಯಲ್ಲಿ ಅದು ಧರ್ಮವೇ ಅಲ್ಲ ಎಂದಿದ್ದಾರೆ.