ಮಂಗಳೂರು : ಅಶ್ಲೀಲ ವೀಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ಇರಿಸಿಕೊಂಡಿರುವುದಕ್ಕಾಗಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ದರೆಗುಡ್ಡೆ ಎನ್ನುವವರ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2024ರಲ್ಲಿ ಮೂಡುಬಿದಿರೆ ಹೊರವಲಯದಲ್ಲಿರುವ ‘ಮೈಟ್’ ಕಾಲೇಜು ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವವರಿಗೆ ಬಸ್ ಮಾಲಕ ಸ್ಥಳದಲ್ಲೇ ಪರಿಹಾರ ನೀಡಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಇದೇ ಸಮಿತ್ ರಾಜ್‌ನನ್ನು ಮೂಡುಬಿದಿರೆ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಎರಡು ದಿನಗಳ ಜಾಮೀನಿನ ಮೇಲೆ ಬಿಡುಗಡೆಗೊಂಡ ಸಮಿತ್ ರಾಜ್ ಮೊಬೈಲ್ ನನ್ನು ಪರಿಶೀಲಿಸಿದಾಗ ಅದರಲ್ಲಿ ಅಶ್ಲೀಲ ವೀಡಿಯೋಗಳಿರುವುದು ಬೆಳಕಿಗೆ ಬಂದಿದೆ.