ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಹವಾಮಾನ ವೈಪರಿತ್ಯ ಉಂಟಾಗಿದೆ.
ಇದ್ರಿಂದ ಬೆಂಗಳೂರಿನ ಜನರು ಮಲೇರಿಯಾಗೆ ತುತ್ತಾಗ್ತಿದ್ದಾರೆ. ಕಳೆದೊಂದು ವಾರದಲ್ಲಿ 53 ಜನರಿಗೆ ಮಲೇರಿಯಾ ಹಾಗೂ 32 ಮಂದಿಗೆ ಚಿಕನ್ ಗುನ್ಯಾ ಕಾಣಿಸಿಕೊಂಡಿದೆ.
ನಗರದಲ್ಲಿ ಸದ್ಯ ಚಳಿ ಜೊತೆಗೆ ಮೋಡದ ವಾತವರಣ, ಬಿಟ್ಟು ಬಿಟ್ಟು ಮಳೆ, ಆಗೊಮ್ಮೆ ಈಗೊಮ್ಮೆ ಬಿಸಿಲು, ಸಂಜೆಯಾದರೆ ಮಳೆ, ಚಳಿ ಹೀಗೆ ಹವಾಮಾನ ವೈಪರಿತ್ಯದಿಂದ ಜನರಿಗೆ ರೋಗಗಳು ತಗಲುತ್ತಿವೆ. ಬೆಂಗಳೂರಿನಲ್ಲಿ ಕಳೆದ 15 ದಿನಗಳಲ್ಲಿ ಶೇ. 15 ರಿಂದ 20 ರಷ್ಟು ಜನ ಜ್ವರದಿಂದ ಬಳಲುತ್ತಿದ್ದಾರೆ. ಮಕ್ಕಳು ಸಹ ಜ್ವರ, ಕೆಮ್ಮು, ಗಂಟಲು ನೋವು, ಶೀತ, ನೆಗಡಿ, ವಾಂತಿಯಿಂದ ಬಳಲುತ್ತಿದ್ದಾರೆ.
ಡೆಂಘೀ ಟೈಫಾಯ್ಡ್, ವೈರಲ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಜನರು ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.


















