ಹುಬ್ಬಳ್ಳಿ: ರಾಜ್ಯದಲ್ಲಿ ಇತ್ತೀಚೆಗೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗಿದ್ದು,ಈ ಕುರಿತು ತನಿಖೆಗೆ ಎಸ್ಐಟಿ ತಂಡವನ್ನು ರಚನೆ ಮಾಡುವಂತೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಆಗ್ರಹ ಮಾಡಿದ್ದಾರೆ.
ಬಡವರು, ಎಸ್.ಸಿ, ಎಸ್.ಟಿ. ಮಕ್ಕಳೇ ಇರುವ ಹಾಸ್ಟೆಲ್‌ಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಇದರ ಪ್ರಮಾಣ ಹೆಚ್ಚಿದೆ. ಎಲ್ಲ ಬಾಲಕಿಯರ ಹಾಸ್ಟೆಲ್‌ಗಳಲ್ಲೂ ಪುರುಷರೇ ವಾರ್ಡನ್ ಗಳಾಗಿದ್ದಾರೆ. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಹಾಸ್ಟೆಲ್ ಗಳಲ್ಲಿ ಬಾಲಕಿಯರು ಗರ್ಭಿಣಿಯಾರಾಗುತ್ತಿರುವ ಪ್ರಕರಣವನ್ನು ಎಸ್.ಐಟಿ ತನಿಖೆಗೆ ವಹಿಸುವ ಮೂಲಕ ಸೂಕ್ತ ತನಿಖೆಯಾಗಬೇಕು. ಬಾಲ್ಯವಸ್ಥೆಯಲ್ಲಿ ಗರ್ಭ ಧರಿಸುವುದು ಅವರ ಭವಿಷ್ಯವನ್ನೇ ಕಿತ್ತುಕೊಂಡಂತೆ ಎಂದು ಕಳವಳವ್ಯಕ್ತಪಡಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಈ ಬಗ್ಗೆ ಮಾತನಾಡುತ್ತಿಲ್ಲ. ಮಹಿಳೆಯರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. 10 ಸಾವಿರ ಬಾಲಕಿಯರು ಗರ್ಭ ಧರಿಸಿದರೂ ಈ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಲು ಸರ್ಕಾರ ಮೀನಾ ಮೇಷ ಏಣಿಸುತ್ತಿದೆ. ರಾಜ್ಯ ಮಹಿಳಾ ಆಯೋಗ ಯಾಕೆ ಈ ಕುರಿತು ಶಿಫಾರಸ್ಸು ಮಾಡುತ್ತಿಲ್ಲಾ? ಕಾನೂನು ಸುವ್ಯವಸ್ಥೆಯನ್ನು ಪುಂಡ ಪೋಕರಿಗಳಿಗೆ ಅಡ ಇಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬೀದರ್ DC ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ | ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ



















