ಬೆಂಗಳೂರು : ಕೇಂದ್ರ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ (NTPC Recruitment 2026) 27 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 27 ಕ್ರಾಫ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಉದ್ಯೋಗ ಹಿಡಿಯಬೇಕು ಎಂದು ಬಯಸುವವರಿಗೆ ಒಳ್ಳೆಯ ಅವಕಾಶವಾಗಿದೆ. ಅದರಲ್ಲೂ, ವಿಜಯಪುರ ಜಿಲ್ಲೆಯಲ್ಲಿ ಕೆಲಸ ಹುಡುತ್ತಿರುವವರಿಗೆ ಇದು ಗುಡ್ ನ್ಯೂಸ್ ಎನಿಸಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC)
ಹುದ್ದೆಗಳ ಹೆಸರು: ಕ್ರಾಫ್ಟ್ ಅಪ್ರೆಂಟಿಸ್
ಒಟ್ಟು ಹುದ್ದೆಗಳು: 27
ಉದ್ಯೋಗ ಸ್ಥಳ: ವಿಜಯಪುರ
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಏಪ್ರಿಲ್ 11
19 ಕ್ರಾಫ್ಟ್ ಅಪ್ರೆಂಟಿಸ್ ಹಾಗೂ 8 ಅಸಿಸ್ಟಂಟ್ ಟ್ರೈನರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ ಎಸ್ಸೆಸ್ಸೆಲ್ಸಿ, ಐಟಿಐ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 21,500 ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ntpc.co.in ಗೆ ಭೇಟಿ ನೀಡಿ
ನಿಮಗೆ ಬೇಕಾದ ಹುದ್ದೆಗಳ ಅಧಿಸೂಚನೆ ಓದಿ
ಆನ್ ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ
ಫ್ಯೂಚರ್ ರೆಫರೆನ್ಸಿಗಾಗಿ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಬೇಕು
ಇದನ್ನೂ ಓದಿ | ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳ ನೇಮಕಾತಿ.. 1.42 ಲಕ್ಷ ರೂ. ಭರ್ಜರಿ ಸಂಬಳ!



















