ಬೆಂಗಳೂರು : ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು, ನವೆಂಬರ್ ಕ್ರಾಂತಿ ಕಿಚ್ಚು, ಶಾಸಕರ, ಸಚಿವರ ಗೊಂದಲಮಯ ಹೇಳಿಕೆಗಳ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಕಾಂಗ್ರೆಸ್ ವಲಯದಲ್ಲಿ ಇದು ಕುತೂಹಲಕ್ಕೆ ಕಾರಣವಾಗಿದ್ದರೆ, ಅತ್ತ ಪ್ರತಿಪಕ್ಷ ಬಿಜೆಪಿಗೆ ಟೀಕಾಸ್ತ್ರ ಒದಗಿಸಿಕೊಟ್ಟಿದೆ. ಇಂದಿನ ಸಭೆಯ ನಂತರ ಕಾಂಗ್ರೆಸ್ ಬೆಳವಣಿಗೆಗಳು ಏನಿರಲಿವೆ ಎಂಬ ಕುತೂಹಲ ಸದ್ಯ ಕರ್ನಾಟಕ ರಾಜಕಾರಣದಲ್ಲಿ ಮೂಡಿದೆ.
ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ತಿದ್ದು, ಹೈಕಮಾಂಡ್ಗೆ ಸಚಿವ ಸಂಪುಟ ಪುನಾರಚನೆ ಅಗತ್ಯ ಕಾಣಿಸಿದೆ. ನವೆಂಬರ್ ಇಲ್ಲವೇ ಡಿಸಿಎಂಬರ್ನಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ಸಾಧ್ಯತೆ ಇದೆ. ಹೀಗಾಗಿಯೇ ಇಂದು ಡಿನ್ನರ್ ಮೀಟಿಂಗ್ ಕರೆಯಲಾಗಿದೆ ಅನ್ನೋ ಚರ್ಚೆ ನಡೆಯುತ್ತಿದೆ. ಡಿನ್ನರ್ ಮೀಟಿಂಗ್ ನೆಪದಲ್ಲಿ ಪಕ್ಷದೊಳಗಿನ ಕೆಲ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದ್ದು, ಸಿಎಂ ಸಂಪುಟ ಪುನಾರಚನೆಯ ಸುಳಿವು ನೀಡಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ.ಒಟ್ಟಿನಲ್ಲಿಇಂದಿನ ಸಿಎಂ ಡಿನ್ನರ್ ಸಭೆಯತ್ತ ಕಾಂಗ್ರೆಸ್ ಪಡೆಯ ಚಿತ್ತ ನೆಟ್ಟಿದೆ. ಇಂದು ರಾತ್ರಿ ಊಟ ಮುಗಿದ ಬಳಿಕ ಹೊಸ ಆಟ ಶುರುವಾಗುತ್ತದೆಯಾ ಎಂಬ ಕುತೂಹಲ ಮೂಡಿದೆ.
ಸಿಎಂ ಡಿನ್ನರ್ ಪಾಲಿಟಿಕ್ಸ್!
- ಡಿನ್ನರ್ ಮೀಟಿಂಗ್ ನೆಪದಲ್ಲಿ ಸಂಪುಟ ಪುನಾರಚನೆ ಚರ್ಚೆ
- ವರ್ಷಾಂತ್ಯದಲ್ಲಿ ಡಜನ್ಗೂ ಹೆಚ್ಚು ಸಚಿವರಿಗೆ ಕೊಕ್ ಸುದ್ದಿ
- ಸಚಿವರ ಕೈಬಿಡುವ ವದಂತಿ ನಡುವೆಯೇ ಡಿನ್ನರ್ ಮೀಟಿಂಗ್
- ಸಂಪುಟದಿಂದ ಕೈಬಿಡುವ ಬಗ್ಗೆ ಮನವರಿಕೆ ಮಾಡಲು ಔತಣ
- 12ಕ್ಕೂ ಹೆಚ್ಚು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ?
- ನಿಷ್ಕ್ರಿಯ, ಭ್ರಷ್ಟಾಚಾರದ ಆರೋಪ ಹೊತ್ತವರಿಗೆ ಗೇಟ್ಪಾಸ್
- ಸಚಿವರನ್ನ ಕೈಬಿಡಲು ಹೈಕಮಾಂಡ್ ಕಟ್ಟಪ್ಪಣೆ ಅನ್ನೋ ವರದಿ
- ಮುಂದಿನ ಎರಡೂವರೆ ವರ್ಷವು ಚುನಾವಣೆ ಮೇಲೆ ಗಮನ
- ಈ ಕಾರಣ ಸಂಪುಟ ಸರ್ಜರಿ ಅನಿವಾರ್ಯ ಅನ್ನೋ ಸಂದೇಶ
ಇನ್ನೊಂದೆಡೆ ಕಾಂಗ್ರೆಸ್ ಒಳಗಿನ ಬೆಳವಣಿಗೆ, ಗೊಂದಲಗಳು ಪ್ರತಿಪಕ್ಷ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದ್ದು, ಕಾಂಗ್ರೆಸನಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಅನ್ನು ‘ಮೋಜಿನ ಸಭೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಮತ್ತೊಂದೆಡೆ, ಸಿಎಂ ಮೇಲೆ ಮಾಟ-ಮಂತ್ರ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ.