ಬೆಂಗಳೂರು: ಬಾಕಿ ಅಸ್ತಿ ತೆರಿಗೆ ಪಾವತಿ ಮಾಡದ ಕಟ್ಟಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಳೆದ ಮಾರ್ಚ್ 31ರ ವರೆಗೆ ಬಾಕಿ ಆಸ್ತಿ ತೆರಿಗೆ ಕಟ್ಟುವಂತೆ ಬಿಬಿಎಂಪಿ ಅವಕಾಶ ನೀಡಿತ್ತು.
ಆದರೆ, ಇದುವರೆಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಟ್ಟಡ ಮಾಲೀಕರು ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಿಲ್ಲ. ಹೀಗಾಗಿ ನಾಳೆಯಿಂದ ಬಾಕಿ ಉಳಿಸಿಕೊಂಡ ಕಟ್ಟಡ ಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ಮೊದಲು ಮೂರು ಹಂತದಲ್ಲಿ ನೋಟಿಸ್ ಜಾರಿ ಮಾಡಲಾಗುತ್ತದೆ. ನೋಟಿಸ್ ಗೆ ಸ್ಪಂದಿಸಿ ತೆರಿಗೆ ಕಟ್ಟಿಲ್ಲ ಅಂದರೆ, ಪಾಲಿಕೆ ಕಾಯ್ದೆ ಪ್ರಕಾರ ಹರಾಜು ಪ್ರಕ್ರಿಯೆ ನಡೆಯುತ್ತದೆ.
ಈಗಾಗಲೇ ಬಾಕಿ ಅಸ್ತಿ ತೆರಿಗೆ ಉಳಿಸಿಕೊಂಡ ಕಟ್ಟಡ ಗಳ ಲಿಸ್ಟ್ ನ್ನು ಬಿಬಿಎಂಪಿ ರಡಿ ಮಾಡಿದೆ. ಪ್ರಮುಖವಾಗಿ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳು ಬಾಕಿ ತೆರಿಗೆ ಕಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿ ಡಬಲ್ ತೆರಿಗೆ ವಸೂಲಿಗೆ ಪಾಲಿಕೆ ಮುಂದಾಗಿದೆ.