ಮಡಿಕೇರಿ: ಸಾಹಿತ್ಯ ಉತ್ಸವಗಳನ್ನು ವೈಭವೀಕರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ಎಂದಾಕ್ಷಣ ಅಲ್ಲಿ ಸಾಹಿತ್ಯದ ವರ್ಚಸ್ಸು ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯ ಮುಂದಿನ ಸಮ್ಮೇಳನದೊಳಗೆ ಪಾಲನೆ ಆಗದಿದ್ದರೆ, ಅದನ್ನು ಖಂಡಿಸುವಂತಾಗಬೇಕು. ಸರ್ಕಾರಕ್ಕೆ ಎಚ್ಚರಿಕೆ ಕೊಡುವ ರೀತಿಯಲ್ಲಿ ಇಂತಹ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಉತ್ತಮ ಸೌಲಭ್ಯ ಇರುವ ಕನ್ನಡ ಶಾಲೆಗಳನ್ನು ನಿರ್ಮಿಸಿದರೆ ಶಾಲೆಗಳು ಉಳಿಯುತ್ತವೆ. ಕನ್ನಡವೂ ಉಳಿಯುತ್ತದೆ. ಇಲ್ಲಿ ಆಂಗ್ಲ ಭಾಷೆಯನ್ನೂ ಕಲಿಸಬಹುದು. ಶಿಕ್ಷಕರೇ ಇಲ್ಲ ಅಂದ ಮೇಲೆ ವಿದ್ಯಾರ್ಥಿಗಳು ಪಾಸ್ ಆಗುವುದು ಹೇಗೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.