ಇತ್ತೀಚಿಗೆ “ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ” ಮತ್ತು “ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್” ನಾನ್ ಸ್ಟಿಕ್ ತವಾದ ಬಗ್ಗೆ ಸಂಶೋಧನೆ ನಡೆಸಿ, ಹೀಗೊಂದು ವರದಿ ನೀಡಿದೆ. ನಾನ್ ಸ್ಟಿಕ್ ತವಾಗಳು ಡೇಂಜರಸ್ ಎನ್ನುವುದನ್ನು ಸಂಶೋಧನೆಯ ಮೂಲಕ ದೃಢಪಡಿಸಿವೆ.
ಈ ನಾನ್ ಸ್ಟಿಕ್ ತವಾಗಳ ಮೇಲ್ಬಾಗವನ್ನು,
‘ಪಾಲಿಟೆಟ್ರಾಫ್ಲೋರೋ ಎಥಿಲೀನ್’ ನಿಂದ ಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಟೆಫ್ಲಾನ್’ ಎಂದು ಕರೆಯಲಾಗುತ್ತದೆ. ಈ ‘ಟೆಪ್ಲಾನ್’, ಕಾರ್ಬನ್ ಮತ್ತು ಫ್ಲೋರಿನ್ ನಿಂದ ಮಾಡಿದ ಸಂಶ್ಲೇಷಿತ ವಸ್ತುವಾಗಿದೆ. ಇದು ಅಂಟಿಕೊಳ್ಳದ ಮೇಲ್ಮೈಯನ್ನು
ಉತ್ಪಾದಿಸುವುದರದಿಂದ ನಾನ್ ಸ್ಟಿಕ್ ತವಾಗಳಲ್ಲಿ ಇದನ್ನು ಬಳಸುತ್ತಾರೆ. ಇಲ್ಲಿ ತವಾವನ್ನು ಹೆಚ್ಚಿನ ಉರಿಯಲ್ಲಿ ಬಳಸಿದಾಗ ಈ ಟೆಪ್ಲಾನ್, ವಿಷಕಾರಿ ಹೊಗೆಯನ್ನ ಹೊರ ಸೂಸುತ್ತೆ, ಇದನ್ನ ಸೇವಿಸಿದರೆ ಅರೋಗ್ಯದಲ್ಲಿ ಸಮಸ್ಯೆ ಉಂಟಾಗುವುದು.
ಶ್ವಾಸಕೋಶ ಸಂಬಂದಿತ ಕಾಯಿಲೆಗಳು, ಥೈರಾಯಿಡ್ ಸಮಸ್ಯೆ ಹಾಗೆಯೇ ಕೆಲವು ಕ್ಯಾನ್ಸರ್ ರೋಗಕ್ಕೂ ಈ ಹೊಗೆ ಕಾರಣವಾಗುತ್ತದೆ.

ಇನ್ನು ಬಳಸುವಾಗ ಆಗುವಂತಹ ಸ್ಕ್ರಾಚ್ ಗಳಿಂದಾಗಿ, ತವಾಗಳ ಮೇಲ್ಮೈಯಲ್ಲಿನ ಮೈಕ್ರೋ ಪ್ಲಾಸ್ಟಿಕ್ ಗಳು ಆಹಾರದ ಜೊತೆ ಸೇರಿಸುವುದರಿಂದ, ವಿಷಕಾರಿ ಅಂಶ ನಮ್ಮ ದೇಹ ಸೇರಿ, ಹಲವು ಸಮಸ್ಯೆಗಳನ್ನು ತಂದೊಡುತ್ತದೆ. ಇದಕ್ಕೆ ಬದಲಾಗಿ ಮಣ್ಣಿನ ಪಾತ್ರೆ ಹಾಗೂ ಸ್ಟೈನ್ ಲೆಸ್ ಸ್ಟೀಲ್ ಬಳಸಿ ಎಂದು ವರದಿಯಲ್ಲಿ ತಿಳಿಸಲಾಗಿದೆ.