ಬೆಂಗಳೂರು: ಡಿ.ಕೆ. ಶಿವಕುಮಾರ್(D.K. Shivakumar) ಸಿಎಂ ಆಗುವುದನ್ನು ಯಾರೂ ತಪ್ಪಿಸಲು ಆಗುವುದಿಲ್ಲ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ಭವಿಷ್ಯ ನುಡಿದಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹಾಗೂ ಕೆಪಿಸಿಸಿ (KPCC)ಅಧ್ಯಕ್ಷರ ಬದಲಾವಣೆ ವಿಚಾರವನ್ನು ಅನಗತ್ಯವಾಗಿ ಹಬ್ಬಿಸಿರುವ ಗೊಂದಲ ಇದು. ಇವರೆಲ್ಲ ಸೇರಿಕೊಂಡು ಕಾಂಗ್ರೆಸ್ (congress)ಪಕ್ಷದ ನೇಮ್ ಅಂಡ್ ಫೇಮ್ ಹಾಳು ಮಾಡುತ್ತಿದ್ದಾರೆ. ಅವರೇನು ಕಾಂಗ್ರೆಸ್ ಕಟ್ಟಿದವರಲ್ಲವಲ್ಲ. ಹೀಗಾಗಿ ಅವರಿಗೆ ಬೇಕಾದಂಗೆ ಪಕ್ಷ ಹಾಳು ಮಾಡುವ ಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
2023 ರ ವಿಧಾನಸಭೆ ಚುನಾವಣೆಯಲ್ಲಿ(Assembly election) ಕಾಂಗ್ರೆಸ್‌ಗೆ 136 ಸ್ಥಾನ ಬರಲು ಡಿ.ಕೆ.ಶಿವಕುಮಾರ್ ಕೊಡುಗೆ ಇದೆ. ಡಿಕೆಶಿಯರದ್ದು ಖರ್ಚಾಗಿಲ್ವ? ಹಾಗಾಗಿ ಡಿ.ಕೆ.ಶಿವಕುಮಾರ್ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಸಿಎಂ ಮುಡಾ ಕೇಸ್‌ನಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಮೈಸೂರು ವಿಜಯನಗರ ಸಾಮ್ರಾಜ್ಯ ಆಗಿದೆ. 1200 ರೂಗೆ 50×80 ಒಂದು ಸೈಟು ಯಾರ ಕಾಲದಲ್ಲಿ ಇತ್ತು, ವಿಜಯನಗರ ಸಾಮ್ರಾಜ್ಯದಲ್ಲಿ (Vijayanagar Empire) ಚಿನ್ನಬೆಳ್ಳಿ ಮಾರಿದಂತೆ ಸೈಟು ಮಾರಿದ್ದಾರೆ. ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.