ಬೆಂಗಳೂರು: ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಸಭೆ-ಸಮಾರಂಭ, ಸದಾ ಭರ್ಜರಿ ನಾನ್ ವೆಜ್ ಊಟ, ಬೇಕಾದಾಗ ಮದ್ಯ ಕುಡಿಯುತ್ತ ಆರಾಮಾಗಿ ಇದ್ದ ದರ್ಶನ್, ಸದ್ಯ ಪರಪ್ಪನ ಅಗ್ರಹಾರದಲ್ಲಿ ನಿದ್ದೆ ಬಾರದ ಜೀವನ ಸೆವೆಸುತ್ತಿದ್ದಾರೆ.
ಜೈಲೂಟ ಸರಿಯಾಗುತ್ತಿಲ್ಲ ಎಂಬ ಕಾರಣಕ್ಕೆ ಆರೋಗ್ಯದ ನೆಪ ಹೇಳಿ ಮನೆಯೂಟದ ಬೇಡಿಕೆ ಇಟ್ಟು ಕೋರ್ಟ ಮೋರೆ ಹೋಗಿದ್ದರು. ಆದರೆ, ಆ ರಿಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ದರ್ಶನ್ ಗೆ ಶಾಕ್ ನೀಡಿದೆ. ಮನೆಯೂಟದ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ದರ್ಶನ್ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾ ಗೊಳಿಸಿದೆ.
ಮನೆಯಿಂದ ಊಟ (Home Cooked Food) ಹಾಗೂ ಹಾಸಿಗೆ ಸೌಲಭ್ಯ ಪಡೆಯುವುದಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜುಲೈ 25ಕ್ಕೆ ಆದೇಶ ಕಾಯ್ದಿರಿಸಿತ್ತು. ಇಂದು ದರ್ಶನ್ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ದರ್ಶನ್ ಪರ ವಕೀಲರು ಈ ಆದೇಶ ವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.