ಮನೆಯಲ್ಲಿದ್ದರೆ ಚಿನ್ನ ಚಿಂತೆ ಯಾತಕೆ ಚಿನ್ನ ಅನ್ನೋ ಮಾತುಗಳನ್ನ ನೀವೆಲ್ಲಾ ಕೇಳಿರತ್ತೀರಿ. ಭಾರತದ ಮಧ್ಯಮ ವರ್ಗದ ಪಾಲಿನ ಸೇಫ್ಟಿ ಡೆಪಾಸಿಟ್ ಅಂದ್ರೆ ಅದು ಚಿನ್ನ.
ಹೌದು. ಸಂಬಳಕ್ಕೆ ಶ್ರಮಿಸುವ ಭಾರತದ ಮಿಡಲ್ ಕ್ಲಾಸ್ ಜನ ಕೂಡಿಟ್ಟ ಹಣದಲ್ಲಿ ಬಂಗಾರ ಖರೀದಿಸೋದುಂಟು. ಹೀಗೆ ಖರೀದಿಸಿದ ಬಂಗಾರ ಭವಿಷ್ಯದಲ್ಲಿ ಮನೆ, ಮದುವೆ ಅಂತಾ ಅನಿವಾರ್ಯ ಬಂದ್ರೆ ಚಿನ್ನ ಮಾರಿ ಆ ಹಣದಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲಾಗುತ್ತೆ.
ಅಡವಿಡಬೇಕಿಲ್ಲ, ಹಣಕ್ಕಾಗಿ ಕಾದು ಕೂರಬೇಕಿಲ್ಲ
ನಮ್ಮಲ್ಲೆಲ್ಲಾ ಇವತ್ತು ಬಂಗಾರವನ್ನು ಅನಿವಾರ್ಯತೆಗೆ ಅಡವಿಡುವುದೇ ಇಲ್ಲಾ ಮಾರುವುದು ವಾಡಿಕೆ. ಇದಕ್ಕಾಗಿ ಹತ್ತಾರು ಖಾಸಗಿ ಕಂಪನಿಗಳು ಬ್ಯಾಂಕ್ ಗಳು ಕೆಲಸ ಮಾಡುತ್ತಿವೆ. ಆದರೆ, ಇವತ್ತು ನಾವು ನಿಮಗೆ ಹೇಳುತ್ತಿರುವ ವ್ಯವಸ್ಥೆ ನಮ್ಮಲ್ಲೂ ಶುರುವಾಗಿ ಬಿಟ್ಟರೆ ನಿಮ್ಮ ಬಂಗಾರಕ್ಕೆ ಅಲ್ಲೇ ಡ್ರಾ ಅಲ್ಲೇ ಬಹುಮಾನದ ಹಾಗೆ ಕಾಸು ಸಿಗುವುದು ನಿಶ್ಚಿತ.
ಎಟಿಎಂಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತೀರಾ ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಬಂದು ಅದೆಷ್ಟೋ ಮಂದಿ ಎಟಿಎಂಗೆ ಹೋಗುವ ರೂಢಿಯನ್ನೇ ಮರೆತಿದ್ದಾರೆ. ದರೆ ಚೀನಾದಲ್ಲೊಂದು ಹೊಸ ಮಾದರಿ ಎಟಿಎಂ ಪರಿಚಯಿಸಲಾಗಿದೆ. ಹಾಗಂತಾ ಇದು ಅಂತಿಂಥದ್ದಲ್ಲ ಬದಲಿಗೆ ಚಿನ್ನದ ಎಟಿಎಂ.
ನಿಮ್ಮ ಚಿನ್ನ ಎಟಿಎಂಗೆ ಹಾಕಿ, ದುಡ್ಡು ಪಡೀರಿ
ಯೆಸ್….ಆಶ್ಚರ್ಯವೆನ್ನಿಸಿದರೂ ಇದು ವಾಸ್ತವ. ಚೀನಾದ ಶಾಂಘೈನಲ್ಲೊಂದು ವಿನೂತನ ಪ್ರಯತ್ನ ಮಾಡಲಾಗಿದೆ. ನಿಮ್ಮ ಬಳಿ ಇರುವ ಚಿನ್ನವನ್ನ ಈ ಯಂತ್ರದಲ್ಲಿ ಹಾಕಿದರೆ ಆಯ್ತು. ತೂಕ, ಅದಕ್ಕೆ ನಿಗದಿ ಮಾಡಲಾಗಿರುವ ಹಣವನ್ನು ಪ್ರದರ್ಶಿಸುತ್ತೆ..ಅಷ್ಟೇ ನೀವು ಓಕೆ ಅಂದ್ರೆ ಆಯ್ತು, ಚಿನ್ನ ಥಟ್ ಅಂತಾ ನೀರಾಗುತ್ತೆ ನಿಮ್ಮ ಖಾತೆಗೆ ದುಡ್ಡು ಬರುತ್ತೆ. ಬರೋಬ್ಬರಿ 1200 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಯಂತ್ರದಲ್ಲೇ ನಿಮ್ಮ ಚಿನ್ನ ಕರಗುತ್ತೆ.
ಅದರ ಶುದ್ಧತೆಗೆ ಅನುಗುಣವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತೆ. ಹಾಗಿದ್ದರೆ ಸದ್ಯಕ್ಕೆ ಚೀನಾದಲ್ಲಿರುವ ಈ ಯಂತ್ರ ಶೀಘ್ರವೇ ಭಾರತಕ್ಕೆ ಬಂದ್ರೆ, ನಿಮ್ಮ ಚಿನ್ನಕ್ಕೆ ನಿಗದಿತ ಮತ್ತು ನಿರ್ಧಿಷ್ಠ ಮೌಲ್ಯದ ಹಣ ಸಿಗೋ ಕಾಲ ದೂರವಿಲ್ಲ.