ಬೆಳಗಾವಿ: ರಾಜ್ಯದಲ್ಲಿನ ಜೈಲುಗಳಲ್ಲಿ ಎಷ್ಟೇ ಕಠಿಣ ನಿಯಮ ಜಾರಿಗೆ ತಂದರೂ ಅಲ್ಲಿನ ಮೋಜು- ಮಸ್ತಿಗೆ ಮಾತ್ರ ಕಡಿವಾಣ ಹಾಕಲು ಆಗುತ್ತಿಲ್ಲ.
ಬೆಳಗಾವಿ ಜೈಲಿನಲ್ಲಿನ ರಾಜಾತಿಥ್ಯ ಬೆಳಕಿಗೆ ಬಂದಿದ್ದು, ಕಾಸು ಇದ್ದವನೇ ಬಾಸ್ ಎನ್ನುವಂತಾಗಿದೆ. ಪಿಎಸ್ಐ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಕೈದಿಯೊಬ್ಬನಿಗೆ ರಾಜಾತಿಥ್ಯ ನೀಡಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಜೈಲು ಸಿಬ್ಬಂದಿ ಲಂಚ ಪಡೆದು, ಜೈಲಿನ ಒಳಗೆ ಕಾರವಾರದ ಮೀನನ್ನು ಸಪ್ಲೆ ಮಾಡಿದ್ದಾನೆ.
ನೆಲಮಂಗಲದಲ್ಲಿ ನಡೆದ ಪಿಎಸ್ ಐ ಜಗದೀಶ ಮರ್ಡರ್ ಕೇಸ್ ನಲ್ಲಿ ಹರೀಶಬಾಬು ಎಂಬ ಆರೋಪಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಹರೀಶ ಬಾಬು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇದ್ದು, ಈತನೇ ತನ್ನ ಆಪ್ತರ ಮೂಲಕ ಜೈಲಾಧಿಕಾರಿಗಳಿಗೆ ಲಂಚ ನೀಡಿದ್ದಾನೆ. ಆನಂತರ ಕಾರವಾರ ಮೀನು ಸರಬರಾಜು ಮಾಡಲಾಗಿದೆ ಎಂದು ತಿಳಿದು ಬಂದಿದೆ.