ಬೆಂಗಳೂರು: ಬಿಜೆಪಿ ಶಾಸಕ ಸಿ.ಟಿ. ರವಿ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ಗುಡುಗಿದ್ದಾರೆ,.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸಂಸ್ಕೃತಿಯಾಗಿರುವ ಸಿ.ಟಿ. ರವಿ (CT Ravi) ಹೇಳಿಕೆ ಘೋರ ಅಪರಾಧವಾಗಿದೆ. ಯಾವುದೇ ಹೆಣ್ಣು ಮಗಳನ್ನು ತಮ್ಮ ಮಗಳೆಂದು ಊಹಿಸಿಕೊಂಡರೆ ಈ ರೀತಿ ಮಾತನಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯು ದೇಶಕ್ಕೆ ಸಂಸ್ಕೃತಿಯ ಪಾಠ ಮಾಡುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ಇರಲಿ ಅಥವಾ ಬೇರೆ ಯಾರೋ ಹೆಣ್ಣು ಮಗಳು ಇರಲಿ ಈ ರೀತಿ ಹೇಳಿಕೆ ನೀಡುವುದು ತಪ್ಪು ಎಂದು ಆರೋಪಿಸಿದ್ದಾರೆ.
ಪ್ರಹ್ಲಾದ್ ಜೋಶಿ ಫೇಕ್ ಎನ್ ಕೌಂಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರನ್ನು ಎನ್ಕೌಂಟರ್ ಮಾಡುವುದು? ಅದು ಫೇಕ್ ಎನ್ ಕೌಂಟರ್ ಅಲ್ಲ. ಫೇಕ್ ಕೌಂಟರ್. ಅವರ ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ಈ ರೀತಿ ಫೇಕ್ ಎನ್ಕೌಂಟರ್ ಎಂಬ ಫೇಕ್ ಕೌಂಟರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಡಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ ರವಿ ಬಹಿರಂಗ ಕ್ಷಮೆ ಕೇಳಬೇಕು. ಆಗ ಎಲ್ಲವೂ ಮುಗಿದು ಹೋಗುತ್ತದೆ ಎಂದು ಹೇಳಿದ್ದಾರೆ.