ಕೋಲ್ಕತ್ತಾ: ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅವರನ್ನು ಕಣ್ತುಂಬಿಕೊಳ್ಳಲು ಸಾವಿರಾರು ರೂಪಾಯಿ ಖರ್ಚು ಮಾಡಿ ಬಂದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದ್ದು, ಇದರ ಪರಿಣಾಮವಾಗಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ. ಮೆಸ್ಸಿ ಸರಿಯಾಗಿ ಕಾಣಿಸಲಿಲ್ಲ ಎಂದು ರೊಚ್ಚಿಗೆದ್ದ ಅಭಿಮಾನಿಗಳು ಕ್ರೀಡಾಂಗಣದ ಕುರ್ಚಿ, ಹೋರ್ಡಿಂಗ್‌ಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿದ್ದಾರೆ.
ಭಾರತ ಪ್ರವಾಸದಲ್ಲಿರುವ ಮೆಸ್ಸಿ ಅವರಿಗಾಗಿ ಕೋಲ್ಕತ್ತಾದ ವಿವೇಕಾನಂದ ಯುವಭಾರತಿ (ಸಾಲ್ಟ್ ಲೇಕ್) ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಭಿಮಾನಿಗಳು ₹5,000 ದಿಂದ ₹25,000 ವರೆಗೆ ದುಬಾರಿ ಟಿಕೆಟ್ ಖರೀದಿಸಿ ಆಗಮಿಸಿದ್ದರು. ಆದರೆ, ಮೆಸ್ಸಿ ವೇದಿಕೆಗೆ ಬಂದಾಗ ಅವರ ಸುತ್ತ ಜನಜಂಗುಳಿ ಇದ್ದಿದ್ದರಿಂದ ದೂರದಲ್ಲಿದ್ದ ಅಭಿಮಾನಿಗಳಿಗೆ ಅವರನ್ನು ನೋಡಲು ಸಾಧ್ಯವಾಗಲಿಲ್ಲ. ಇದು ಅಭಿಮಾನಿಗಳ ಆಕ್ರೋಶಕ್ಕೆ ಮುಖ್ಯ ಕಾರಣವಾಯಿತು.

10 ನಿಮಿಷಕ್ಕೆ ಕಾರ್ಯಕ್ರಮ ಅಂತ್ಯ
ಇನ್ನಷ್ಟು ನಿರಾಸೆಯ ಸಂಗತಿ ಎಂದರೆ, ಸಾವಿರಾರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರೂ ಮೆಸ್ಸಿ ಕೇವಲ 10 ನಿಮಿಷಗಳಲ್ಲಿ ಕಾರ್ಯಕ್ರಮವನ್ನು ಮುಗಿಸಿ ಹೊರಟುಹೋದರು. ಈ ಗೊಂದಲದ ನಡುವೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲಿವುಡ್ ನಟ ಶಾರುಖ್ ಖಾನ್, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗಿನ ಸಂವಾದವೂ ನಡೆಯಲಿಲ್ಲ. ಮೆಸ್ಸಿ ಹೊರನಡೆದ ತಕ್ಷಣವೇ ಪರಿಸ್ಥಿತಿ ಕೈಮೀರಿತು.
ಕ್ರೀಡಾಂಗಣದಲ್ಲಿ ಹಿಂಸಾಚಾರ
ಮೆಸ್ಸಿ ತೆರಳುತ್ತಿದ್ದಂತೆ ಹತಾಶೆಗೊಂಡ ಅಭಿಮಾನಿಗಳು ಮೈದಾನದತ್ತ ಖಾಲಿ ಬಾಟಲಿಗಳು ಮತ್ತು ಕುರ್ಚಿಗಳನ್ನು ಎಸೆಯಲು ಆರಂಭಿಸಿದರು. ಹಲವರು ಭದ್ರತಾ ವలಯವನ್ನು ಮೀರಿ ಮೈದานಕ್ಕೆ ನುಗ್ಗಿ, ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಹೋರ್ಡಿಂಗ್‌ಗಳು ಮತ್ತು ಕ್ಯಾಬಿನ್‌ಗಳನ್ನು ಧ್ವಂಸಗೊಳಿಸಿದರು. ಆಯೋಜಕರು ಸಾಮಾನ್ಯ ಅಭಿಮಾನಿಗಳನ್ನು ಕಡೆಗಣಿಸಿ, ಕೇವಲ ಗಣ್ಯರಿಗೆ ಆದ್ಯತೆ ನೀಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಭಾರತದ ಮೇಲಿನ ಸುಂಕಾಸ್ತ್ರ ಟ್ರಂಪ್‌ಗೆ ತಿರುಗಿ ಬಿತ್ತ | ಸುಂಕ ರದ್ದಿಗೆ ಅಮೆರಿಕ ಸಂಸತ್‌ನಲ್ಲಿ ನಿಲುವಳಿ



















