ಬೆಂಗಳೂರು: ಸಿಎಂ ಬದಲಾವಣೆಯೂ ಇಲ್ಲ. ಸಂಪುಟ ವಿಸ್ತರಣೆಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದಿದ್ದ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿದ ಅವರು, ‘ಊಟಕ್ಕೆ ಸೇರಿದರೆ ಅದನ್ನೇ ಸಭೆ ಎಂದು ಹೇಳುವುದು ತಪ್ಪು. ಊಹೆ ಮಾಡಿದರೆ ಏನು ಮಾಡಬೇಕು? ಊಹೆ ಮಾಡಿ ಮಾತನಾಡುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.
ನಾವು ಊಟ ಮಾಡಲು ಸೇರಿದ್ದೇವು ಅಷ್ಟೇ. ಯಾವುದೇ ರಾಜಕೀಯ ಚರ್ಚೆಗಳನ್ನು ಮಾಡಲು ಸೇರಿಲ್ಲ. ಸಚಿವ ಸಂಪುಟ ಸದ್ಯಕ್ಕೆ ಯಾವುದೇ ಕಾರಣಕ್ಕೂ ವಿಸ್ತರಣೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಬಸ್ ಟಿಕೆಟ್ ದರ ಹೆಚ್ಚಾಗಿದ್ದಕ್ಕೆ ಈಗ ಆರ್.ಅಶೋಕ್ ಪ್ರತಿಭಟಿಸುತ್ತಿದ್ದಾರೆ. ಆದರೆ, ಅವರು ಸಾರಿಗೆ ಮಿನಿಸ್ಟರ್ ಆಗಿದ್ದಾಗ ಏರಿಕೆಯಾಗಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.