ಹಾಸನ : ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಿಂದ ಹಾಸನಕ್ಕೆ ಹೆಚ್ಚುವರಿ ಬಸ್ ಬಿಡುವುದಾಗಿ ಎಸ್ಪಿ ಮನವಿ ಮಾಡಿದ್ದರು ಈ ಮನವಿಯನ್ನು ಸಚಿವ ರಾಮಲಿಂಗ ರೆಡ್ಡಿ ನಿರಾಕರಿಸಿದ್ದಾರೆ.
ಹಾಸನಾಂಭೆಯ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಯಿಂದ ಭಕ್ತವೃಂದ ಹರಿದು ಬರುತ್ತಿದೆ. ಇದರಿಂದ ಭಕ್ತರ ನಿಯಂತ್ರಣ ಕಷ್ಟ ಸಾಧ್ಯವೆಂದು ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಿಂದ ಹಾಸನಕ್ಕೆ ಪ್ರತಿ ಎರಡ್ಮೂರು ನಿಮಿಷಕ್ಕೊಂದು ಹೆಚ್ಚುವರಿ ಬಸ್ ಬಿಡುವುದಾಗಿ ಹಾಸನದ ಡಿಸಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.
ಇಗಾಗಲೇ ಹಾಸನಕ್ಕೆ ಹೆಚ್ಚುವರಿಯಾಗಿ ಬಿಎಂಟಿಸಿ ಬಸ್ ಬಿಟ್ಟಿದೆ ಸುರಕ್ಷತೆ ದೃಷ್ಟಿಯಿಂದ ಹಾಸನಕ್ಕೆಇನ್ನು ಹೆಚ್ಚುವರಿ ಬಿಡಲ್ಲ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.