ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ನಿಫಾ ವೈರಸ್ ಆತಂಕ ಕೂಡ ಕಾಡುತ್ತಿದೆ.
ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್‌ಗೆ (Nipah) ಬಾಲಕ ಬಲಿಯಾಗಿದ್ದಾನೆ. ಹೀಗಾಗಿ ರಾಜ್ಯಕ್ಕೂ ನಿಫಾ ವೈರಸ್ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತೋಲೆ ಹೊರಡಿಸಿದ್ದು, ನಿಫಾ ಸುರಕ್ಷಿತ ಎಂದು ಘೋಷಿಸುವವರೆಗೂ ಕೇರಳದ ಮಲಪ್ಪುರಂ ಜಿಲ್ಲೆಗೆ ತೆರಳದಂತೆ ಸೂಚಿಸಲಾಗಿದೆ.
ದ ಮಲಪ್ಪುರಂ ಜಿಲ್ಲೆಯಲ್ಲಿ ಜುಲೈ 21ರಂದು ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಎಇಎಸ್ (AES) ರೋಗ ಲಕ್ಷಣಗಳನ್ನು ಹೊಂದಿದ್ದ ಮಲಪ್ಪುರಂನ 14 ವರ್ಷದ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಕೇಂದ್ರವು ಮಲಪ್ಪುರಂನಲ್ಲಿ ರೋಗವನ್ನು ತಡೆಗಟ್ಟಲು ತಕ್ಷಣದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸೂಚಿಸಿದೆ. ಕೇರಳ ರಾಜ್ಯ ಸರ್ಕಾರವು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಸಲಹೆ ನೀಡಿದೆ. ಹಣ್ಣಿನ ಬಾವಲಿಗಳು ನಿಫಾ ವೈರಸ್‌ನ ಸಾಮಾನ್ಯ ಜಲಾಶಯವಾಗಿದ್ದು ಬಾವಲಿಯಿಂದ ಕಲುಷಿತಗೊಂಡ ಹಣ್ಣುಗಳನ್ನು ಆಕಸ್ಮಿಕವಾಗಿ ಸೇವಿಸುವುದರಿಂದ ಮನುಷ್ಯರು ಸೋಂಕಿಗೆ ಒಳಗಾಗಬಹುದು ಎನ್ನಲಾಗುತ್ತಿದೆ.

ಇಲ್ಲಿಯವರೆಗೆ ಕರ್ನಾಟಕ ರಾಜ್ಯದಿಂದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಕೇರಳದಲ್ಲಿ ಏಕಾಏಕಿ ಪ್ರಕರಣ ವರದಿಯಾದಾಗಲೆಲ್ಲಾ ಕೇರಳದಿಂದ ಗಡಿಯಾಚೆಗಿನ ಸೋಂಕು ಹರಡುವುದನ್ನು ತಡೆಯಲು ರಾಜ್ಯವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.


















