ಬೆಂಗಳೂರು: ಸಿಲಿಕಾನ್ ಸಿಟಿ (Bengaluru)ಯಲ್ಲಿ ನಿಫಾ ಆತಂಕ ಶುರುವಾಗಿದ್ದು, ಬರೋಬ್ಬರಿ 41 ಜನರನ್ನು ಹೋಮ್ ಕ್ವಾರಂಟೈನ್ (Home Quarantine)ಗೆ ಒಳಪಡಿಸಲಾಗಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಅಲ್ಲದೇ, ರಾಜ್ಯದಲ್ಲಿ ನಿಫಾ (Nipah Virus) ಜೊತೆಗೆ ಮಂಕಿಪಾಕ್ಸ್ ಆತಂಕ ಕೂಡ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು, ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ್ ಗೆ ಒಳೆಪಡಿಸಲಾಗಿದೆ.
ಈಗ 41 ಪ್ರಾಥಮಿಕ ಸಂಪರ್ಕಿತರ ಪತ್ತೆಯಾಗಿದ್ದು, 41 ಜನರಿಗೂ ಕಡ್ಡಾಯ ಹೋಂ ಐಸೊಲೇಷನ್ ಮಾಡಲಾಗಿದೆ. ಆರೋಗ್ಯಾಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ಈ ಪೈಕಿ ಓರ್ವ ವ್ಯಕ್ತಿಗೆ ನಿಫಾ ಗುಣಲಕ್ಷಣ ಕಂಡು ಬಂದಿದ್ದು ಗುಣಲಕ್ಷಣಗಳಿರುವ ವ್ಯಕ್ತಿಯ ರಕ್ತ ಮತ್ತು ಸೆರಂ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಾಜ್ಯದಲ್ಲಿ ಯಾವ ನಿಫಾ ಕೇಸ್ ಕೂಡ ದಾಖಲಾಗಿಲ್ಲ. ಮುಂದಿನ ಎರಡು ದಿನಗಳ ಬಳಿಕ ಲಕ್ಷಣ ಕಂಡು ಬಾರದಿದ್ದರೆ ಆತಂಕ ಕಡಿಮೆ ಆಗಲಿದೆ. ಕ್ವಾರಂಟೈನ್ ನಿಂದ ಸ್ನೇಹಿತರು ಹಾಗೂ ಕಾಲೇಜು ಸಿಬ್ಬಂದಿ ಈಗ ಪರದಾಡುವಂತಾಗಿದೆ.