ಬೀದರ್: 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ವಿಚಾರವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಗೊಂದಲಕ್ಕೆ ಎಡೆಮಾಡಿ ಕೊಡುವ ಪ್ರಶ್ನೆ ಇಲ್ಲ. ಸಂಸತ್ ಚುನಾವಣೆಯಲ್ಲಿ ಕೈ ಜೋಡಿಸಿದ್ದೇವೆ. ದೇವೇಗೌಡರು ಅತ್ಯಂತ ಸ್ಪಷ್ಟತೆಯಿಂದ ರಾಜಕೀಯ ಮಾಡಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರಿಗೆ ಸಮಾಧಾನ ಇರಲಿಲ್ಲ. ಅದನ್ನು ರಾಜ್ಯದ ಜನ ನೋಡಿದ್ದಾರೆ. ಅದರಲ್ಲಿ ಮುಚ್ಚು, ಮರೆ ಇಲ್ಲ. ಮೋದಿ ಅವರ ನಾಯಕತ್ವದಲ್ಲಿ ನಮ್ಮ ದೇಶ ಆರ್ಥಿಕವಾಗಿ ಮೂರನೇ ದೊಡ್ಡ ದೇಶವಾಗಿದೆ. ಆ ಕಾರಣಕ್ಕೆ ನಾವು ಎನ್.ಡಿ.ಎಗೆ ಸಪೋರ್ಟ್ ನೀಡಿದ್ದೇವೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದಿದ್ದಾರೆ.
50-50 ಸೀಟು ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಸೀಟು ಹಂಚಿಕೆ ಬಗ್ಗೆ ಮುಂದೆ ಮಾತನಾಡೋಣ. ನಾವೀಗ ಸಂಘಟನೆ ಮಾಡುತ್ತಿದ್ದೇವೆ. ಅದರ ಬಗ್ಗೆ ಮಾತನಾಡಲು ವರಿಷ್ಠರು ಇದ್ದಾರೆ ಎಂದಿದ್ದಾರೆ.



















