ಬೆಂಗಳೂರು : ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಆರೋಗ್ಯ ಮಿಷನ್ ನಲ್ಲಿ ಖಾಲಿ ಇರುವ 4 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಇದರೊಂದಿಗೆ ಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂದು ಬಯಸುತ್ತಿರುವವರಿಗೆ ಶುಭ ಸಮಾಚಾರ ದೊರೆತಂತಾಗಿದೆ. ನೇರ ಸಂದರ್ಶನದ ಮೂಲಕ ನೇಮಕಾತಿ (NHM Karnataka Recruitment 2026) ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಮಿಷನ್, ಕರ್ನಾಟಕ
ಒಟ್ಟು ಹುದ್ದೆಗಳ ಸಂಖ್ಯೆ: 4
ಹುದ್ದೆ ಹೆಸರು: ಸೀನಿಯರ್ ಪಬ್ಲಿಕ್ ಹೆಲ್ತ್ ಕನ್ಸಲ್ಟಂಟ್ ಇತ್ಯಾದಿ
ಉದ್ಯೋಗ ಸ್ಥಳ: ಬೆಂಗಳೂರು
ಸಂದರ್ಶನದ ದಿನಾಂಕ: ಫೆಬ್ರವರಿ 23
ಸೀನಿಯರ್ ಪಬ್ಲಿಕ್ ಹೆಲ್ತ್ ಕನ್ಸಲ್ಟಂಟ್, ಪಬ್ಲಿಕ್ ಹೆಲ್ತ್ ಕನ್ಸಲ್ಟಂಟ್, ಡೇಟಾ ಅನಾಲಿಸ್ಟ್ ಹಾಗೂ ಹಬ್ ಎಂಜಿನಿಯರ್ ವಿಭಾಗದಲ್ಲಿ ತಲಾ ಒಂದು ಹುದ್ದೆಯ ನೇಮಕಾತಿ ನಡೆಯುತ್ತಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಬಿಇ, ಬಿ ಟೆಕ್, ಎಂಬಿಬಿಎಸ್, ಎಂಡಿ, ಪಿಜಿ ಡಿಪ್ಲೋಮಾ ಕೋರ್ಸ್ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. ನೇಮಕಾತಿ ಹೊಂದಿದವರಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 80 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ nhm.karnataka.gov.in ಗೆ ಭೇಟಿ ನೀಡಬಹುದಾಗಿದೆ.
ಸಂದರ್ಶನ ನಡೆಯುವ ಸ್ಥಳ
The Office of Chief Administrative Officer, National Health Mission, 1st Floor West wing, Arogya Soudha, Magadi Road, 1st Cross. Designation Bengaluru 560023
ಏನಿದು ಯೋಜನೆ?
ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ, ವಿಶೇಷವಾಗಿ ಬಡವರು ಮತ್ತು ದುರ್ಬಲ ಗುಂಪುಗಳಿಗೆ ಕೈಗೆಟುಕುವ, ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಕರ್ನಾಟಕದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಸ್ಥಾಪಿಸಲಾಗಿದೆ. ಇದು ತಾಯಂದಿರು ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಡೆಗಟ್ಟುವಿಕೆಗೆ ಮತ್ತು ಆರೋಗ್ಯ ವ್ಯವಸ್ಥೆ ಬಲಪಡಿಸಲು ಶ್ರಮಿಸುತ್ತದೆ
ಇದನ್ನೂ ಓದಿ : ಟಿ20 ವಿಶ್ವಕಪ್‌ನಲ್ಲಿ ‘ಕಾಂಗರೂ’ ಪಡೆಗೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ | 19 ವರ್ಷಗಳ ಬಳಿಕ ಐತಿಹಾಸಿಕ ಜಯ



















