ಬೆಂಗಳೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ (NHAI Recruitment 2025) 60 ಉಪ ವ್ಯವಸ್ಥಾಪಕ ಹುದ್ದೆಗಳು (ಡೆಪ್ಯೂಟಿ ಮ್ಯಾನೇಜರ್) ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಮೇ 10ರಿಂದಲೇ ಅರ್ಜಿ ಸ್ವೀಕಾರ ಆರಂಭವಾಗಿದ್ದು, ಜೂನ್ 6 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. nhai.org ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬ್ಯಾಚಲರ್ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಗರಿಷ್ಠ 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಿನಾಯಿತಿ ನೀಡಲಾಗಿದ್ದರೆ, ಒಬಿಸಿಯವರಿಗೆ ಮೂರು ವರ್ಷಗಳ ವಿನಾಯಿತಿ ಇದೆ. ವಿಶೇಷ ಚೇತನ ಎಸ್ಸಿ, ಎಸ್ಟಿಯವರಿಗೆ 15 ವರ್ಷ, ಒಬಿಸಿಯವರಿಗೆ 13 ಹಾಗೂ ಜನರಲ್ ಕೆಟಗರಿಯವರಿಗೆ 10 ವರ್ಷಗಳ ವಿನಾಯಿತಿ ಇದೆ.
ಮೀಸಲಾತಿವಾರು ವರ್ಗೀಕರಣ
ಮೀಸಲು ಇಲ್ಲದ ಹುದ್ದೆಗಳು- 27
ಪರಿಶಿಷ್ಟ ಜಾತಿ- 09
ಪರಿಶಿಷ್ಟ ಪಂಗಡ- 04
ಒಬಿಸಿ- 13
ಇಡಬ್ಲ್ಯೂಎಸ್- 07
ಒಟ್ಟು- 60
ಸಿವಿಲ್ ಎಂಜಿನಿಯರಿಂಗ್ ಅಧ್ಯಯನದ ವೇಳೆ ಪಡೆದುಕೊಂಡ ಮಾರ್ಕ್ಸ್ ಹಾಗೂ ಗೇಟ್ ಪರೀಕ್ಷೆಯ ಅಂಕಗಳನ್ನು ಆಧರಿಸಿ ನೇಮಕಾತಿ ಮಾಡಲಾಗುತ್ತದೆ. ನೇಮಕಾತಿ ಹೊಂದಿದವರಿಗೆ 50 ಸಾವಿರ ರೂಪಾಯಿಯಿಂದ 1.77 ಲಕ್ಷ ರೂಪಾಯಿವರೆಗೆ ವೇತನ ನೀಡಲಾಗುತ್ತದೆ. ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.



















