ಹಾಸನ: ಮದುವೆಯಾದ ಆರೇ ತಿಂಗಳಲ್ಲಿ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚನ್ನಗಿರಿ ತಾಲ್ಲೂಕಿನ ಸೋಮಲಾಪುರ ಗ್ರಾಮದ ವಿದ್ಯಾ (24) ಸಾವನ್ನಪ್ಪಿದ ದುರ್ದೈವಿ. ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ವಿದ್ಯಾ ಹಾಗೂ ಸೋಮಲಾಪುರ ಗ್ರಾಮದ ಶಿವು ಕಳೆದ 6 ತಿಂಗಳ ಹಿಂದೆ ಮದುವೆಯಾಗಿದ್ದರು. ಪತಿ ಶಿವು ಪೊಲೀಸ್ ಪೇದೆಯಾಗಿದ್ದು, ಬೆಂಗಳೂರಿನ ಶಂಕರಿಪುರಂನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಅನುಮಾನಾಸ್ಪದ ರೀತಿಯಲ್ಲಿ ರೈಲ್ವೆ ಟ್ರ್ಯಾಕ್ ಬಳಿ ವಿದ್ಯಾ(24) ಮೃತದೇಹ ಪತ್ತೆಯಾಗಿದೆ.
ಪತಿ ಕುಟುಂಬ ಸದಸ್ಯರಿಂದಲೇ ಮಗಳ ಹತ್ಯೆಯಾಗಿದೆ ಎಂದು ವಿದ್ಯಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮದುವೆಯಾದ ಆರಂಭದಿಂದಲೂ ಪತಿ ಕುಟುಂಬದಿಂದ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಜೂನ್ 30 ರಿಂದ ವಿದ್ಯಾ ಕಾಣೆಯಾಗಿದ್ದರು ಎನ್ನಲಾಗಿದೆ. ಆದರೆ, ನಿನ್ನೆ ಸಂಜೆ ಅರಸೀಕೆರೆ ಹತ್ತಿರದ ರೈಲ್ವೆ ಟ್ರ್ಯಾಕ್ ಬಳಿ ಮೃತದೇಹ ಪತ್ತೆಯಾಗಿದೆ. ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.