ಆನೇಕಲ್: ಕೇವಲ 18 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿ (Newly Married Woman) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಆನೇಕಲ್ (Anekal) ತಾಲೂಕಿನ ಸರ್ಜಾಪುರದಲ್ಲಿ (Sarjapura) ನಡೆದಿದೆ. ರಿಹಾನ್ (24) ಸಾವನ್ನಪ್ಪಿದ ದುರ್ದೈವಿ. ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿದೆ.
ರಿಹಾನ ಗಂಡ ಸಬಾಶ್ ಮೇಲೆ ಯುವತಿಯ ಕುಟುಂಬಸ್ಥರು ಸದ್ಯ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ. ಮೃತ ರಿಹಾನ್ ಗಂಡ ಶಬಾಸ್ ಕೊಲೆ ಮಾಡಿ ನೇಣು ಹಾಕಿದ್ದಾನೆಂದು ಆರೋಪಿಸಲಾಗಿದೆ. ಈ ಕುರಿತು ಸರ್ಜಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.