ಬೆಂಗಳೂರು : ಗಿಡಗಳ ಪೊದೆಯಲ್ಲಿ ಕಂದಮ್ಮವೊಂದು ಅಳು ಕೇಳಿ ಜನರು ಗಾಬರಿಯಾಗಿದ್ದರು. ಜೋರಾಗಿ ಮಗು ಅಳುತ್ತಿರುವುದನ್ನು ನೋಡಿ ಸ್ಥಳೀಯರು ಹುಡುಕಿದಾಗ ಪೊದೆಗಳ ನಡುವೆ ನವಜಾತ ಶಿಶು ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಚಂದಾಪುರ ಚೋಳರ ಕೆರೆಏರಿ ಸಮೀಪ ಈ ಘಟನೆ ಬೆಳಕಿಗೆ ಬಂದಿದೆ.
“ಬ್ಯಾಗ್ ನಲ್ಲಿ ಪತ್ತೆಯಾಗಿತ್ತು ನವಜಾತ ಶಿಶು !”
ಮಗು ಅಳುತ್ತಿರುವ ಸದ್ದು ಕೇಳಿ ಸ್ಥಳೀಯರು ಪರಿಶೀಲನೆ ಮಾಡಿದ ನಂತರ ಪೊದೆಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಬ್ಯಾಗ್ ವೊಂದರಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಗು ಪತ್ತೆಯಾಗಿದೆ. ಗಮನಿಸಿದ ಸ್ಥಳಿಯರು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಶಿಶುವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆಂದು ತಿಳಿದು ಬಂದಿದೆ.
ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಮಗುವಿಗೆ ಆರೈಕೆ ಮಾಡಿದ್ದಾರೆ. ಈ ಮಗು ಮೆಕೋನಿಯಮ್ ಸ್ಟೈನ್ ಸಮಸ್ಯೆಯಿಂದ ಬಳಲುತ್ತಿದೆ. ಮಗು ತನ್ನದೇ ಮಲ ಸೇವಿಸಿದ್ದರಿಂದ ಈ ಸಮಸ್ಯೆ ಬಂದಿದೆ ಎನ್ನಲಾಗುತ್ತಿದೆ. ವೈದ್ಯರ ಚಿಕಿತ್ಸೆಯ ನಂತರ ಶಿಶು ಆರೋಗ್ಯವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.