ನವದೆಹಲಿ: ಅಮೆರಿಕನ್ ಏರ್‌ಲೈನ್ಸ್‌ನ ನ್ಯೂಯಾರ್ಕ್-ದೆಹಲಿ ವಿಮಾನವು “ಬಾಂಬ್ ಬೆದರಿಕೆ” ಕಾರಣದಿಂದ ರೋಮ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫೆಬ್ರವರಿ 22 ರಂದು ನ್ಯೂಯಾರ್ಕ್‌ನ ಜೆಎಫ್‌ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿರುವ ಎಮೆರಿಕನ್ ಏರ್‌ಲೈನ್ಸ್ ವಿಮಾನ ದೆಹಲಿಗೆ ತಲುಪಬೇಕಿತ್ತು, ಆದರೆ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ರೋಮ್‌ಗೆ ತಿರುಗಿಸಲಾಯಿತು. 199 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬೋಯಿಂಗ್ ವಿಮಾನವು ರೋಮ್‌ನ ಫಿಯುಮಿಚಿನೊ ವಿಮಾನ ನಿಲ್ದಾಣ ದಲ್ಲಿ ಸುರಕ್ಷಿತವಾಗಿ ನೆಲಕ್ಕಿಳಿಯಿತು.
ಇಟಲಿಯ ಎಎನ್‌ಎಸ್‌ಎ ಸುದ್ದಿ ಸಂಸ್ಥೆಯ ಪ್ರಕಾರ, “ಶಂಕಿತ ಬಾಂಬ್ ಬೆದರಿಕೆ” ಭೂಸ್ಪರ್ಶಕ್ಕೆ ಕಾರಣ. ಲೇನಾರ್ಡೊ ದ ವಿನ್ಚಿ ರೋಮ್ ಫಿಯುಮಿಚಿನೊ ವಿಮಾನ ನಿಲ್ದಾಣ ದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದ್ದು, “ನಮ್ಮ ಮೊದಲ ಆದ್ಯತೆ ಸುರಕ್ಷತೆ ಮತ್ತು ಭದ್ರತೆ. ನಮ್ಮ ಗ್ರಾಹಕರ ಸಹಕಾರಕ್ಕಾಗಿ ಧನ್ಯವಾದಗಳು,” ಎಂದು ಏರ್‌ಲೈನ್ಸ್ ಹೇಳಿಕೆ ನೀಡಿದೆ.
ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ, ಅವರಿಗೆ ನೆರವು ನೀಡಲಾಯಿತು. ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಗೆ ಯಾವುದೇ ಅಡಚಣೆ ಉಂಟಾಗಲಿಲ್ಲ. ಯುಎಸ್ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ವಿಮಾನವನ್ನು ಸುರಕ್ಷಿತವಾಗಿ ಇಳಿಸಿರುವುದನ್ನು ದೃಢಪಡಿಸಿದೆ.
ಅಮೆರಿಕನ್ ಏರ್‌ಲೈನ್ಸ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಫೆಬ್ರವರಿ 22 ರಂದು ರಾತ್ರಿ 8:14 ಕ್ಕೆ ನ್ಯೂಯಾರ್ಕ್ ಜೆಎಫ್‌ಕೆ ವಿಮಾನ ನಿಲ್ದಾಣದಿಂದ ಹೊರಟ ವಿಮಾನವು ಸ್ಥಳೀಯ ಸಮಯ ಸಂಜೆ 5:30ರ ಹೊತ್ತಿಗೆ ಇಟಲಿಯ ಲೇನಾರ್ಡೊ ದ ವಿನ್ಚಿ ರೋಮ್ ಫಿಯುಮಿಚಿನೊ ವಿಮಾನ ನಿಲ್ದಾಣದಲ್ಲಿ ತಲುಪಲಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಿರುವ ದೃಶ್ಯಗಳಲ್ಲಿ , ಬೋಯಿಂಗ್ 787-9 ವಿಮಾನವನ್ನು ಇಟಾಲಿಯನ್ ಏರ್ ಫೋರ್ಸ್ ಎಸ್ಕಾರ್ಟ್ ಮಾಡುತ್ತಿರುವುದು ಕಂಡು ಬಂದಿದೆ.