ಧಾರವಾಡ : ಇಂದಿನಿಂದ ಹಿಂದೂ ಪಂಚಾಂಗದ ಹೊಸ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಹೋಮದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ.
ಧಾರವಾಡದಲ್ಲಿ ವಿಶೇಷ ಹೋಮದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. ಸುರ್ಯೋದಯದ ಸಮಯದಲ್ಲಿ ಸ್ಥಳೀಯರು ವಿಶೇಷ ಹೋಮ ಮಾಡುವುದರ ಮೂಲಕ ಹೊಸ ವರ್ಷ ಸ್ವಾಗತಿಸಿದ್ದಾರೆ. ಧಾರವಾಡದ ಕಲ್ಯಾಣ ನಗರದಲ್ಲಿ 108 ಅಗ್ನಿಹೋತ್ರ ಹೋಮದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ.
ಕಲ್ಯಾಣ ನಗರ ಸಮುದಾಯ ಭವನದಲ್ಲಿ ಸಾಮೂಹಿಕ ಅಗ್ನಿಹೋತ್ರ ಹೋಮ ನಡೆಸಲಾಯಿತು. ಈ ಅಗ್ನಿಹೋಮವನ್ನು ಶಾಸ್ತ್ರೋಕ್ತವಾಗಿ ಪದ್ಮಹಸ್ತ ಫೌಂಡೇಶನ್ ಮತ್ತು ಕಲ್ಯಾಣ ನಗರ ಕ್ಷೇಮಾಭಿವೃದ್ಧಿ ಸಂಘ ನಡೆಸಿತು.