ಬೆಂಗಳೂರು: ರಾಜ್ಯದ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಈ ಮಧ್ಯೆ ಅಬಕಾರಿ ಇಲಾಖೆಗೆ ಮಾತ್ರ ಭರ್ಜರಿ ಆದಾಯ ಹರಿದು ಬಂದಿದೆ.
ಈ ಬಾರಿ ಇಲಾಖೆಯ ನಿರೀಕ್ಷೆಗೂ ಮೀರಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2ರ ವರೆಗೆ ಅರ್ಧ ದಿನದ ಅವಧಿಯಲ್ಲಿ ಕೆಎಸ್ ಬಿಸಿಎಲ್ ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟವಾಗಿದೆ.
ಅಬಕಾರಿ ಇಲಾಖೆ 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ, ಆ ದಾಖಲೆಯನ್ನು ಮೀರಿ ಮಾರಾಟವಾಗಿದೆ. ಹಿಂದಿನ ವರ್ಷ 2023 ರ ಡಿಸೆಂಬರ್ 31 ರಂದು 193 ಕೋಟಿ ರೂ. ಮದ್ಯ ಮಾರಾಟವಾಗಿತ್ತು. ಐಎಂಎಲ್ 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ರೂ. ಆದಾಯ ಹರಿದು ಬಂದಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಗಳ ಮಾರಾಟದಿಂದ 57.75 ಕೋಟಿ ರೂ. ಆದಾಯ ಬಂದಿದೆ.
ಡಿ. 27ರಂದು ಶುಕ್ರವಾರ ಕೂಡ ಬರೋಬ್ಬರಿ 408.58 ಕೋಟಿ ರೂ. ಮದ್ಯ ಮಾರಾಟವಾಗಿತ್ತು. ಈ ವರ್ಷ ಹೆಚ್ಚು ಹಣ ಸಂಗ್ರಹವಾಗಿದ್ದು, ಸರ್ಕಾರದ ಸಂತಸಕ್ಕೂ ಕಾರಣವಾಗಿದೆ. ಇನ್ನೊಂದೆಡೆ ಜನರು ಕೂಡ ಕುಣಿದು ಕುಪ್ಪಳಿಸಿ ಹೊಸ ವರ್ಷ ಸ್ವಾಗತಿಸಿದ್ದಾರೆ.


















