ಬೆಂಗಳೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸೇವೆಯ ಅವಧಿಯನ್ನು ವಿಸ್ತರಿಸಿತ್ತು. ಅಲ್ಲದೇ, ನಮ್ಮ ಮೆಟ್ರೋ ಸೇವೆಯನ್ನು ಹೆಚ್ಚಿನ ಜನರು ಬಳಕೆ ಮಾಡಿದ್ದು, ಭರ್ಜರಿ ಆದಾಯ ಹರಿದು ಬಂದಿದೆ.
ಎಂ.ಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದ್ದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸೇವೆಯನ್ನು ತಡರಾತ್ರಿ ಎರಡು ಗಂಟೆವರೆಗೂ ವಿಸ್ತರಿಸಲಾಗಿತ್ತು. ಹೀಗಾಗಿ ಒಂದೇ ದಿನ ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯ ಹರಿದು ಬಂದಿದೆ.
ಹೊಸ ವರ್ಷ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 5 ರಿಂದ ಮಧ್ಯರಾತ್ರಿ 2.45ರ ವರೆಗೆ ಮೆಟ್ರೋ ರೈಲುಗಳು ಸಂಚಾರ ಮಾಡಿದ್ದವು. ಒಂದೇ ದಿನ ಪಿಂಕ್ ಲೈನ್ನಲ್ಲಿ ಒಟ್ಟು 4,00,583, ಗ್ರೀನ್ ಲೈನ್ನಲ್ಲಿ 2,90,530 ಸೇರಿದಂತೆ ಒಟ್ಟು 8,59,467 ಪ್ರಯಾಣಿಕರು ಪೇಪರ್ ಟಿಕೆಟ್ ಮೂಲಕ ಮೆಟ್ರೋಟದಲ್ಲಿ ಪ್ರಯಾಣಿಸಿದ್ದರು.
ಬೇರೆ ಬೇರೆ ನಿಲ್ದಾಣಗಳಿಂದ 5,423 ಮತ್ತು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ 1,62,931 ಜನರು ಪ್ರಯಾಣ ಮಾಡಿದ್ದರು. ಆ ಮೂಲಕ ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯ ಹರಿದು ಬಂದಿದೆ.