ಬೆಂಗಳೂರು : ಏಪ್ರಿಲ್ 1ರಿಂದ ಹೇಗೆ ಹಣಕಾಸು ನಿಯಮಗಳು ಬದಲಾಗಿವೆಯೋ, ಹಾಗೆಯೇ ಯುಪಿಐ ಪಾವತಿ ನಿಯಮಗಳು ಕೂಡ ಬದಲಾಗಿವೆ. ದೇಶದಲ್ಲಿ ಜನ ಹೆಚ್ಚಾಗಿ ಯುಪಿಐ ಮೂಲಕ ಹಣ ವರ್ಗಾವಣೆ, ಪಾವತಿ ಮಾಡುತ್ತಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 1ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈಗ ಯುಪಿಐ ಮೂಲಕ ವಹಿವಾಟು ನಡೆಸುವವರು ಪಾಸ್ ವರ್ಡ್ ಬದಲಾಗಿ ಎರಡು ಹಂತಗಳ ದೃಢೀಕರಣ ಮಾಡಬೇಕಿದೆ. ಇದು ಆನ್ ಲೈನ್ ಪೇಮೆಂಟ್ ಮಾಡುವವರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ.
‘ಟು-ಫ್ಯಾಕ್ಟರ್ ಅಥೆಂಟಿಕೇಶನ್’ (2FA) ಕಡ್ಡಾಯ
ಈಗ ಕೇವಲ ಒಂದು PIN ಅಥವಾ ಕೇವಲ OTP ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಡಿಜಿಟಲ್ ಪಾವತಿಗೂ (ಯುಪಿಐ, ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್) ಎರಡು ಹಂತದ ದೃಢೀಕರಣ ಇರಲೇಬೇಕು. ಮೊದಲನೆಯದಾಗಿ, ನೀವು ಸೆಟ್ ಮಾಡಿರುವ ಪಾಸ್ ವರ್ಡ್ ಮೂಲಕ ದೃಢೀಕರಿಸಬೇಕು.
ಎರಡನೆಯದಾಗಿ ನಿಮ್ಮ ಮೊಬೈಲ್ ಗೆ ಬರುವ ಒಟಿಪಿ ಅಥವಾ ಬಯೋಮೆಟ್ರಿಕ್ ಅಥವಾ ಫೇಸ್ ಐಡಿ ಮೂಲಕ ಯುಪಿಐ ವಹಿವಾಟು ಮಾಡಲಾಗಿದೆ. ಇದರೊಂದಿಗೆ ಫೋನ್ ಪೇ, ಗೂಗಲ್ ಪೇ ಅಥವಾ ಪೇಟಿಎಂ ಮೂಲಕ ಹಣ ಕಳುಹಿಸುವಾಗ ಹೆಚ್ಚಿನ ಸೆಕ್ಯುರಿಟಿ ಇರುತ್ತದೆ. ಎರಡು ಹಂತದ ದೃಢೀಕರಣದಿಂದಾಗಿ ಪಾವತಿ ಪ್ರಕ್ರಿಯೆಯು ಸ್ವಲ್ಪ ನಿಧಾನವಾಗಬಹುದು, ಆದರೆ ಇದು ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಹೊಸ ನಿಯಮದ ಪ್ರಕಾರ, ಬ್ಯಾಂಕುಗಳು ಅಥವಾ ಪಾವತಿ ಸಂಸ್ಥೆಗಳು ಈ ಭದ್ರತಾ ಕ್ರಮಗಳನ್ನು ಪಾಲಿಸದಿದ್ದರೆ ಮತ್ತು ಆ ಸಂದರ್ಭದಲ್ಲಿ ವಂಚನೆ ನಡೆದರೆ, ಅದರ ಸಂಪೂರ್ಣ ನಷ್ಟವನ್ನು ಬ್ಯಾಂಕುಗಳೇ ಭರಿಸಬೇಕಾಗುತ್ತದೆ. ಗ್ರಾಹಕರಿಗೆ ವಂಚನೆಯಾದ ಹಣವನ್ನು ಮರುಪಾವತಿಸುವ ಜವಾಬ್ದಾರಿ ಈಗ ಬ್ಯಾಂಕುಗಳ ಮೇಲಿದೆ.
ಇದನ್ನೂ ಓದಿ : ಪಂತ್ ಬ್ಯಾಟಿಂಗ್ ಆರ್ಡರ್ ಬಗ್ಗೆ ಜೋರು ಚರ್ಚೆ ; ಯಾವ ಸ್ಥಾನ ಸೂಕ್ತ



















