ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಹೊಸ ರೂಲ್ ಜಾರಿಗೆ ಬಂದಿವೆ.
ಎಫ್.ಎ.ಅರ್ ( ಫ್ಲೋರ್ ಏರಿಯಾ ರೇಷನ್ ) ಅಡಿಯಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಬಿಬಿಎಂಪಿ ನೀಡುವ ಪ್ಲಾನ್ ಗಿಂತ ಹೆಚ್ಚುವರಿ ಪ್ಲೋರ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಬೆಂಗಳೂರು ಸೇರಿದಂತೆ ಒಂಬತ್ತು ಉಪನಗರಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಇದರಿಂದ ನಗರದಲ್ಲಿ ಇನ್ನೂ ಮುಂದೆ ಗಗನಚುಂಬಿ ಕಟ್ಟಡಗಳು ತಲೆ ಎತ್ತಬಹುದು. ಈ ಯೋಜನೆ 5 ಸಾವಿರ ಚದರ ಅಡಿಗಳಿಗಿಂತ ಹೆಚ್ಚುವರಿಯಾಗಿ ಭೂ ಪ್ರದೇಶ ಹೊಂದಿರುವವರಿಗೆ ಮಾತ್ರ ಅನ್ವಯವಾಗಲಿದೆ. ಅಲ್ಲದೇ, 30 ಅಡಿ ರಸ್ತೆ ಅಗಲ ಇರಬೇಕು.
ಈ ರೀತಿ ಕಟ್ಟಡ ನಿರ್ಮಾಣ ಮಾಡುವವರು ಹೆಚ್ಚುವರಿ ಹಣ ಕಟ್ಟಬೇಕು. ಸಬ್ ರಿಜಿಸ್ಟ್ರಾರ್ ಮೌಲ್ಯದ ಶೇ. 28ರಷ್ಟು ಹೆಚ್ಚುವರಿ ಹಣ ಪಾವತಿ ಮಾಡಬೇಕು. ಉದಾಹರಣೆಗೆ 5 ಸಾವಿರ ಚದರ ಅಡಿ ಜಾಗ ಇದ್ದರೆ, ನೀವು 5 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಪಡೆಯಬಹುದು. ಅದೇ 5 ಸಾವಿರ ಚದರ ಅಡಿ ಜಾಗಕ್ಕೆ ಮಾರ್ಗಸೂಚಿ ಬೆಲೆಯ ಶೇ. 28ರಷ್ಟು ಹೆಚ್ಚುವರಿಯಾಗಿ ಹಣ ಪಾವತಿ ಮಾಡಿದ್ರೆ 8 ಅಂತಸ್ತಿನ ಕಟ್ಟಡ ಕಟ್ಟಬಹುದು.