ವಿಜಯಪುರ: ವಿಜಯದಶಮಿ ದಿನ ಹೊಸ ಪಕ್ಷ ಉದಯವಾಗಲಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುತ್ತೇನೆ. ಒಂದು ವೇಳೆ ಹೊಸ ಪಕ್ಷ ಬೇಕು ಅಂದ್ರೆ ಹೊಸ ಪಕ್ಷ ಕಟ್ಟುತ್ತೇನೆ. ವಿಜಯದಶಮಿ ದಿನ ಹೊಸ ಪಕ್ಷ ಉದಯವಾಗಲಿದೆ. ರಾಜ್ಯದಲ್ಲಿ ನನ್ನ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಬೇರೆ ದೇಶದಿಂದಲೂ ಕನ್ನಡಿಗರು ಕರೆ ಮಾಡಿದ್ದರು. ಹೊಸ ಪಕ್ಷ ಮಾಡಿದರೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಹಲವರು ದೇಣಿಗೆ ಕೊಡಲು ಮುಂದಾಗಿದ್ದಾರೆ. ಹೈಕಮಾಂಡ್ ವಿಜಯೆಂದ್ರ ವಿಜಯೆಂದ್ರ ಎಂದ್ರೆ ಪಕ್ಷ ಅದೋಗತಿಗೆ ಹೋಗುತ್ತೆ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಾನು ಯಡಿಯೂರಪ್ಪ ವಿರೋಧಿ ಅಷ್ಟೇ ಎಂದು ಹೇಳಿದ್ದಾರೆ.
ವಿಜಯೆಂದ್ರ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ನಿನ್ನ ತಂದೆಯ ಹಗರಣ ಬಯಲು ಮಾಡುತ್ತೇನೆ ಎಂದು ವಿಜಯೇಂದ್ರಗೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಹೀಗಾಗಿ ವಿಜಯೆಂದ್ರ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಬದಲಾಗಿಣೆ ಆಗಲಿದೆ. ಯತ್ನಾಳ್ ಉಚ್ಚಾಟನೆ ಮಾಡಿ ವಿಜಯೆಂದ್ರನ್ನ ಸಹ ತೆಗೆಯಬಹುದು. ಹೈಕಮಾಂಡ್ ಬೇರೆ ಏನೋ ಉದ್ದೇಶ ಇಟ್ಟುಕೊಂಡು ನನ್ನ ಉಚ್ಚಾಟನೆ ಮಾಡಿರಬಹುದು. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.