ಬೆಂಗಳೂರು : ಕಳೆದ ಮೂರು ನಾಲ್ಕು ವರ್ಷಗಳಿಂದ ಪಾರ್ಕಿಂಗ್‌ಗೆ ಬ್ರೇಕ್ ಹಾಕಿದ ಪಾಲಿಕೆ ಮತ್ತೆ ಇದೀಗ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡಲು ಮುಂದಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಹೊಸ ಪಾರ್ಕಿಂಗ್ ನೀತಿ ಜಾರಿ ಮಾಡಲು ಜಿಬಿಎ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಮೊದಲ ಹಂತದಲ್ಲಿ ಕೇಂದ್ರ ನಗರಪಾಲಿಕೆಯಿಂದ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು, ಕೇಂದ್ರ ವಲಯದ 45 ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ಮಾಡಲಿದೆ.
ಒಂದು ಗಂಟೆಗೆ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ 15ರೂ. ಕಾರಿಗೆ 20ರೂ. ದಿನದ ಪಾಸುಗಳಿಗೆ ಬೈಕ್‌ಗೆ 75ರೂ. ಕಾರಿಗೆ 100ರೂ. ಪಾವತಿಸಬೇಕಾಗುತ್ತದೆ. ಈಗಾಗಲೇ ಪಾರ್ಕಿಂಗ್ ವ್ಯವಸ್ಥೆಗೆ ಟೆಂಡರ್ ಕರೆದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : 2028ರ ವರೆಗೂ ಸಿದ್ದರಾಮಯ್ಯನವರೇ ಸಿಎಂ, ಹೈಕಮಾಂಡ್ ಅವರೊಂದಿಗಿದೆ | ಜಮೀರ್ ಅಹ್ಮದ್



















