ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಫಿಲ್ಮ್ ಹಾಗೂ ಸೀರಿಯಲ್ ಶೂಟ್ ಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಇನ್ನು ಮುಂದೆ ನಗರದಲ್ಲಿ ಚಿತ್ರೀಕರಣ ಮಾಡಬೇಕು ಅಂದರೆ ಬಿಬಿಎಂಪಿ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಇಷ್ಟು ದಿನ ಚಿತ್ರರಂಗ ಬೇಕಾಬಿಟ್ಟಿಯಾಗಿ ಶೂಟಿಂಗ್ ಮಾಡುತ್ತಿತ್ತು. ಆದರೆ, ಇನ್ನು ಮುಂದೆ ಪಾಲಿಕೆ ಪರ್ಮಿಷನ್ ಕಡ್ಡಾಯ ಎನ್ನಲಾಗಿದೆ.
ಪಾಲಿಕೆ ವ್ಯಾಪ್ತಿಯ ಪಾರ್ಕ್, ಕೆರೆ, ರಸ್ತೆ ಸೇರಿದಂತೆ ಖಾಸಗಿ ಸ್ವತ್ತಿನಲ್ಲಿ ಫಿಲ್ಮ್ ಶೂಟ್ ಗೆ ಬಿಬಿಎಂಪಿ ಅನುಮತಿ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
- ಚಿತ್ರೀಕರಣ ಮೂರು ದಿನಗಳ ಮೊದಲೇ ಬಿಬಿಎಂಪಿಗೆ ಚಿತ್ರೀಕರಣದ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು.
- ಸ್ಕ್ರಿಪ್ಟ್ ಅಥವಾ ಸಾರಾಂಶ ಬರವಣೆಗೆ ರೂಪದಲ್ಲಿ ನೋಡಬೇಕು.
- ಪಾತ್ರಧಾರಿಗಳು ಮತ್ತು ಸಿಬ್ಬಂದಿ ವಿವರಗಳು ಸಲ್ಲಿಸಬೇಕು.
- ಅರ್ಜಿದಾರ/ನಿರ್ಮಾಣ ಮುಖ್ಯಸ್ಥರ ಐಡಿ ಪುರಾವೆ ಸಲ್ಲಿಸಬೇಕು.
- ಶೂಟಿಂಗ್ ಮಾಡುವ ಸ್ಥಳ ವಿವರಗಳು ಮತ್ತು ಅವಧಿ ನಮೂದಿಸಬೇಕು.
- .ಪೊಲೀಸ್ ಅನುಮತಿ (ಆಕ್ಷನ್ ದೃಶ್ಯಗಳು ಅಥವಾ ಜನಸಂದಣಿಯ ದೃಶ್ಯಗಳು ಒಳಗೊಂಡಿದ್ದರೆ) ಕಡ್ಡಾಯ.
- ಖಾಸಗಿ ಆಸ್ತಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದರೆ ಆಸ್ತಿ ಮಾಲೀಕರಿಂದ ಲಿಖಿತ ಒಪ್ಪಿಗೆ ಪಡೆಯಬೇಕು.
- ಪಾರಂಪರಿಕ ತಾಣಗಳು ಅಥವಾ ಸಾರ್ವಜನಿಕ ಉದ್ಯಾನವನಗಳಿಗೆ, ಪುರಾತತ್ವ ಅಥವಾ ತೋಟಗಾರಿಕೆ ಇಲಾಖೆಯಿಂದ ಪ್ರತ್ಯೇಕ ಅನುಮಾತಿ ಅಗತ್ಯ.
- ಚಿತ್ರೀಕರಣ ಸಂದರ್ಭದಲ್ಲಿ ಸಾರ್ವಜನಿಕ ಓಡಾಟ ಮತ್ತು ವಾಹನ ಸಂಚಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಪ್ರಾಥಮಿಕ ಜವಾಬ್ದಾರಿ.
- ಪಾಲಿಕೆಗೆ ಇಂತ್ತಿಷ್ಟು ಅಂತ ಹಣ ಪಾವತಿ ಮಾಡಬೇಕು.