ಬೆಂಗಳೂರು: ದೇಶಾದ್ಯಂದ ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾಗಲಿವೆ(New Criminal Laws). ಭಾರತೀಯ ನ್ಯಾಯ ಸಂಹಿತಾ (Indian Code), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (Indian Civil Protection Code) ಹಾಗೂ ಭಾರತೀಯ ಸಾಕ್ಷಿ ಕಾಯ್ದೆ (Indian Evidence Act) ಜಾರಿಗೆ ಬರಲಿವೆ.
ಬ್ರಿಟಿಷರ ಕಾಲದ IPC -ಭಾರತೀಯ ನ್ಯಾಯ ಸಂಹಿತಾ, CrPC-ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ, ಇಂಡಿಯನ್ ಎವಿಡೆನ್ಸ್ ಆ್ಯಕ್ಟ್-ಭಾರತೀಯ ಸಾಕ್ಷ್ಯ ಅಧಿನಿಯಮ ಬದಲಾಗುತ್ತಿವೆ. ಸದ್ಯದ ಕಾಯಿದೆಗೆ ಹೋಲಿಸಿದರೆ ಈ ಮೂರು ಹೊಸ ಕಾನೂನುಗಳಲ್ಲಿ ಹಲವು ವಿನೂತನ ಉದ್ದೇಶಗಳಿವೆ.
ಮೂರು ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷವೇ ಸಂಸತ್ತು ಅಂಗೀಕರಿಸಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆಯನ್ನೂ ಸಹ ಪಡೆಯಲಾಗಿತ್ತು. ಆದರೆ, ಅವು ಜಾರಿಗೆ ಬಂದಿರಲಿಲ್ಲ. ಈ ವರ್ಷ ಫೆಬ್ರವರಿ 25ರಂದು ಮೂರು ಕಾನೂನುಗಳು ಜುಲೈ 1ರಂದು ಜಾರಿಗೆ ಬರುತ್ತವೆ ಎಂದು ಸರ್ಕಾರ ತಿಳಿಸಿತ್ತು. ಈ ಅಧಿನಿಯಮಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅಲ್ಲದೇ, ಈ ಅಧಿನಿಯಮದ ಅಡಿಯಲ್ಲಿ ಒಟ್ಟು 11 ಅಧ್ಯಾಯಗಳಿವೆ.