ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಳ್ವಿ ಅವರನ್ನು ಆಯ್ಕೆ ಮಾಡಲಾಗಿದೆ.
ಮುಂಬಯಿ ತಂಡ, ಕಳೆದ ಋತುವಿನಲ್ಲಿ ರಣಜಿ ಟ್ರೋಫಿ ಮತ್ತು ಇರಾನಿ ಟ್ರೋಫಿ ಗೆಲ್ಲುವುದಕ್ಕಾಗಿ ಓಂಕಾರ್ ಅವರ ಮಾರ್ಗದರ್ಶನ ಸಿಕ್ಕಿತ್ತು. ದೇಶಿ ಕ್ರಿಕೆಟ್ ನಲ್ಲಿ ಹೆಸರು ಮಾಡಿರುವ ಓಂಕಾರ್ ಅವರು ಈ ಹಿಂದೆ ಕೋಲ್ಕತ್ತ ನೈಟ್ ರೈಡರ್ಸ್ ಸಹಾಯಕ ಕೋಚ್ ಆಗಿದ್ದರು.
ಮುಂಬೈ ತಂಡದ ಹಾಲಿ ಹೆಡ್ ಕೋಚ್ ಆಗಿರುವ ಓಂಕಾರ್ ಸಾಳ್ವಿ ಅವರನ್ನು ಆರ್‌ಸಿಬಿ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ ಎಂದು ಫ್ರಾಂಚೈಸಿ ಟ್ವೀಟ್ ಮೂಲಕ ತಿಳಿಸಿದೆ.