ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ ತಮ್ಮ ಮದುವೆ ಕುರಿತು ಮೊದಲ ಬಾರಿಗೆ ಮಾತನಾಡಿದ್ದು., ಹಿಮಾನಿ ಮೋರ್ ಅವರೊಂದಿಗೆ ಪ್ರೀತಿ ಮೂಡುವ ಮೊದಲೇ ಅವರ ಕುಟುಂಬಗಳು ಪರಸ್ಪರ ಪರಿಚಿತವಾಗಿದ್ದವು ಎಂದು ಹೇಳಿದ್ದಾರೆ.
ಸ್ಪೋರ್ಟ್ಸ್ ಟುಡೇ ಗೆ ನೀಡಿದ ಸಂದರ್ಶನದಲ್ಲಿ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾದ ನೀರಜ್, ತಮ್ಮ ಮದುವೆ ವಿಷಯವನ್ನು ಹೇಗೆ ಗೌಪ್ಯವಾಘಿ ಇಟ್ಟಿದ್ದರು ಎಂಬುದರ ಜೊತೆಗೆ, ಅವರ ಕುಟುಂಬ ಮತ್ತು ಸ್ನೇಹಿತರು ಆ ಬಗ್ಗೆ ಮೊದಲೇ ತಿಳಿದಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನೀರಜ್ ಚೋಪ್ರಾ ತಮ್ಮ ಬಹುಕಾಲದ ಗೆಳತಿ ಹಿಮಾನಿ ಮೋರ್ ಜಗೆಗೆ ಜನವರಿ 16ರಂದು ಶಿಮ್ಲಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದರು. ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಈ ವಿವಾಹದಲ್ಲಿ ಪಾಲ್ಗೊಂಡಿದ್ದರು. ಜಗತ್ತಿನ ಉಳಿದ ಭಾಗಕ್ಕೆ ಅವರ ಮದುವೆ ಬಗ್ಗೆ ಗೊತ್ತಾದದ್ದು, ಜನವರಿ 19ರಂದು ಅವರು ಮದುವೆಯ ಚಿತ್ರಗಳನ್ನು ನೋಡಿದ ಮೇಲೆ. “ನಾನು ಹಿಮಾನಿ ಅವರನ್ನು ಹಿಂದಿನಿಂದಲೂ ಬಲ್ಲೆ . ಅವಳ ಕುಟುಂಬವೂ ಕ್ರೀಡಾ ಹಿನ್ನೆಲೆ ಹೊಂದಿದೆ. ಅವರ ತಾಯಿ ಮತ್ತು ತಂದೆ ಕಬಡ್ಡಿ ಆಟಗಾರರಾಗಿದ್ದರು. ಅವರ ಸಹೋದರರು ಬಾಕ್ಸಿಂಗ್ ಮತ್ತು ಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಅವಳೂ ಟೆನಿಸ್ ಆಟಗಾರ್ತಿ ಎಂದು ನೀರಜ್ ಹೇಳಿದ್ದಾರೆ.
“ನಮ್ಮ ಕುಟುಂಬಗಳು ಕ್ರೀಡಾ ಹಿನ್ನೆಲೆ ಹೊಂದಿರುವುದರಿಂದ, ನಮಗೆ ಭೇಟಿ ಮಾಡುವ ಅವಕಾಶ ದೊರಕಿತ್ತು. ನಮಸಾಮಾನ್ಯವಾಗಿ ಇಬ್ಬರು ಕ್ರೀಡಾಪಟುಗಳು ಮಾತನಾಡಿದಂತೆ ನಮ್ಮ ಮಾತುಕತೆ ಆರಂಭವಾಗಿತ್ತು. ಇದು ಪ್ರಾರಂಭದಲ್ಲಿ ಅನೌಪಚಾರಿಕವಾಗಿತ್ತು, ಆದರೆ ನಿಧಾನವಾಗಿ ನಾವು ಒಬ್ಬರ ಮೇಲೆ ಒಬ್ಬರು ಪ್ರೀತಿಗೆ ಬಿದ್ದೆವು,” ಎಂದು ನೀರಜ್ ಬಹಿರಂಗಪಡಿಸಿದ್ದಾರೆ.
ಮದುವೆ ಕಲ್ಕಾ-ಶಿಮ್ಲಾ ಹೆದ್ದಾರಿಯ ಬಳಿ, ಸೋಲಾನ್ ಸಮೀಪ ನಡೆಯಿತು. ಇದು ಬಹಳ ಸರಳ ಸಮಾರಂಭವಾಗಿದ್ದು, ಕೇವಲ 40-50 ಮಂದಿ ಕುಟುಂಬ ಸದಸ್ಯರು ಮಾತ್ರ ಹಾಜರಿದ್ದರು. ನೀರಜ್ ಮತ್ತು ಹಿಮಾನಿ ಸ್ವಯಂ ಈ ಸ್ಥಳವನ್ನು ಆಯ್ಕೆ ಮಾಡಿದ್ದರು.
ನೀರಜ್ ಅವರ ಊರಿನ ಜನರು ಈ ಸಂಗತಿಯನ್ನು ಚೆನ್ನಾಗಿ ತಿಳಿದಿದ್ದರು. 2025ನೇ ಸಾಲಿನ ತರಬೇತಿ ಪ್ರಾರಂಭಿಸುವ ಮೊದಲು ಮದುವೆಯಾಗಲು ಬಯಸಿದ್ದು ಕೂಡ ಗೊತ್ತಾಗಿತ್ತು. ವ
” ವಬಹಳಷ್ಟು ನನ್ನ ಮದುವೆ ಬಗ್ಗೆ ತಿಳಿದಿದ್ದರು. ಕುಟುಂಬ ಮತ್ತು ಸ್ನೇಹಿತರು ಈ ಬಗ್ಗೆ ಹೆಚ್ಚಿನ ಆಸ್ತೆ ಹೊಂದಿದ್ದರು. ನಾನು ಮತ್ತೆ ತರಬೇತಿಗೆ ಹಿಂತಿರುಗಲು ಬಯಸಿದ್ದೆ, ಏಕೆಂದರೆ ಕ್ರೀಡಾ ಋತು ಪ್ರಾರಂಭವಾಗಲಿತ್ತು,” ಎಂದು ನೀರಜ್ ಹೇಳಿದ್ದಾರೆ.
“ಶೀಘ್ರದಲ್ಲೇ ಎಲ್ಲರನ್ನು ಕರೆಯುವ ದೊಡ್ಡ ಸಮಾರಂಭ ನಡೆಯಲಿದೆ ಎಂದು ಭಾವಿಸುತ್ತೇನೆ.” ಎಂದು ನೀರಜ್ ಹೇಳಿದ್ದಾರೆ. ” ವನನ್ನ ಊರಿನ ಜನರು ಈ ಸಂಗತಿ ಅರ್ಥಮಾಡಿಕೊಂಡಿದ್ದಾರೆ. ಯಾವಾಗಲೂ ನಮ್ಮ ಊರಿನಲ್ಲಿ ಯಾವುದೇ ಸಮಾರಂಭ ನಡೆದರೂ ಎಲ್ಲರೂ ಬರುತ್ತಾರೆ. ನನ್ನ ಸಹೋದರಿಯ ಮದುವೆ ಆದಾಗಲೂ ಅಥವಾ ಟೋಕಿಯೋ ಒಲಿಂಪಿಕ್ಸ್ ಗೆಲುವಿನ ಬಳಿಕ ನಾನು ಹಿಂತಿರುಗಿದಾಗಲೂ ಅದು ಸಂಭವಿಸಿತ್ತು. ನಾನು ಮತ್ತು ಹಿಮಾನಿ ಸಮಾರಂಭ ಆಯೋಜಿಸುತ್ತೇವೆ,” ಎಂದು ಅವರು ನೀರಜ್ ಹೇಳಿದ್ದಾರೆ.
ನೀರಜ್ ಮಾವ ಹೇಳುವುದೇನು?
ನೀರಜ್ ಚೋಪ್ರಾದ ಮಾವ ಸುರೇಂದ್ರ ಚೋಪ್ರಾ ಮಾತನಾಡಿ, ವನೀರಜ್ ಮತ್ತು ಹಿಮಾನಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಭೇಟಿಯಾಗಿ ಪ್ರೀತಿಗೆ ಬಿದ್ದರು. ಎರಡೂ ಕುಟುಂಬಗಳು ಅವರ ಸಂಬಂಧ ಒಪ್ಪಿಕೊಂಡಿತು ಎಂದು ಹೇಳಿದ್ದಾರೆ. ಮದುವೆಯನ್ನು ನೀರಜ್ ಅವರ ಕ್ರೀಡಾ ವಿರಾಮದ ವೇಳೆಗೆ ಆಯೋಜಿಸಲಾಯಿತು. 2028 ಲಾಸ್ ಏಂಜಲಿಸ್ ಒಲಿಂಪಿಕ್ಸ್ ಗಾಗಿ ಅವರು ಅವರ ತೊಡಗಿಸಿಕೊಂಡಿರುವ ಕಾರಣ ವೇಳಾಪಟ್ಟಿಯ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಮದುವೆ ಮುಗಿಸಲಾಗಿದೆ.