55 ಕಾಂಗ್ರೆಸ್ ಶಾಸಕರು ಎನ್ ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುತ್ತಿರುವ ವಿಚಾರ ತೆರೆಮರೆಯಲ್ಲಿ ಸುದ್ದಿಯಾಗುತ್ತಿರುವುದಕ್ಕೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಶಿಡ್ಲಘಟ್ಟದಲ್ಲಿ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಬಳಿಕ ವರದಿಗಾರರಿಗೆ ಸ್ಪಂದಿಸಿ ಮಾಯನಾಡಿದ ನಿಖಿಲ್, 2028 ಕ್ಕೆ ಎನ್ ಡಿಎ ಮೈತ್ರಿ ಕೂಟದ ಅಧಿಕಾರ ಫಿಕ್ಸ್. ಏಳೂವರೆ ಕೋಟಿ ಕನ್ನಡಿಗರ ಸಂಪೂರ್ಣ ಆಶೀರ್ವಾದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಲ್ಲದೇ, ಅಲ್ಲಿಯವರೆಗೂ ನಾವು ಯಾವ ವಾಮ ಮಾರ್ಗ ಹಿಡಿಯಲ್ಲ ಎಂದು ನಿಖಿಲ್ ಹೇಳಿದ್ದಾರೆ.